ಕವಿಯಾದೆನ ...??

ಸೃಷ್ಟಿಯ ವರ ಮಾತು ಕೊಟ್ಟನು
ಮನುಜನ ಫಲ ದೃಷ್ಟಿ ಪಡೆದೆನು
ಬೆಸುಗೆಗೆ  ಎರಡು  ಕಿವಿಯು ಮೂಡಿತು
ಮನಸಿಗೆ ಒಂದು ಭಾವವು ಮೂಡಿತು

ಲೇಖನಿ ಹಿಡಿದೆನು ಪದಗಳ ಕಟ್ಟಲು
ರಾಗ ಮೂಲದ:
ಏಳು ಸ್ವರದ:
ನಾದ ಬಳಸಿ:
ಮೂಕ ಮನಸಿಗೆ ಬಾವನೆ ಇಳಿಸಿ :
ಕವಿಯಾಗಿ ಹೋದೆನು ಅಕ್ಷರ ಮಾಲೆ ಬಳಸಿ

ಚೆಲುವೆಯ ಅಂದಕೆ ಬಿಂಬವೇ ಕಾರಣ
ಬಿಂಬದ ಅಂದಕೆ ಬೆಳಕೇ ಕಾರಣ
ಬೆಳಕಿನ ಅಂದಕೆ ಸೃಷ್ಟಿಯೇ ಕಾರಣ
ಸೃಷ್ಟಿಯ ನೋಡಲು ಜೀವವು ಬೇಕು...... ಜೀವವು ಬದುಕಲು ಮನಸೇ ಕಾರಣ........!!!

- ಭರತ್

23 Dec 2016, 12:15 am
Download App from Playstore: