ಕನಸಿನ ಹಾದಿ...!
ರಾತ್ರಿಕನಸಲಿ ಕಾಡಿದ ಕಣ್ಣದಾಳಿಗೆ ಕನ್ನಡಿಯ ಹಿಡಿದು
ನೀ ಬಯಸಲು ನಿನ್ನ ಬೆನ್ನಲೆ ಬರೆವೆ ನನ್ನೆದೆಯ ಹಾಡು
ನನ್ನುಸಿರ ಶಾಖಕೆ ಬೆವರ ಹನಿಗರೆದು, ನಿನ್ನಶೃತಿ ಸೇರಿದ….
ಪದಗಳಿಗೆ ಸಿಗದ ಮಧುರ ಕ್ಷಣಗಳವು
ನಿನ್ನ ಕೈ ಅಷ್ಟು ಗೆರೆಗಳ ಮೇಲೆ ನನ್ನೆಸರ ಬರೆವೆ
ಜಗದ ಜಂಜಾಟವ ಮರೆಸಿ, ನಾಗಜಡೆಯ ಸಿಕ್ಕ ಬಿಡಿಸುವೆ
ಮೈ ಗಂಧಮಕರಂದದಿ ನಸುನಾಚಿದ ನಿನ್ನ
ಮೊಲ್ಲೆ ಮೊಗದ ಸೂಜಿಕಣ್ಣಿನ!!!!
ನಿನ್ನ ಸೀರಿಯ ಸೆರಗಸರಿಸಿ ಹಾಲ ಬೆಳಕಿನಲಿ
ಕುಣಿವ ತನುವೊಳಗಿನ ತುಡಿತದ ಮಿಡಿತವ …
ಅದು ಹೇಗೆ ತಿಳಿಸಲಿ ನಾ…. ಗೆಳತಿ ನೀನೇ ನೋಡು ಬಾ..!!
<ನಿನ್ನಯ ಕನಸಿನ ಹಾದಿಯಲ್ಲಿ >
ಚಂದ್ರಶೇಖರ್ ಹೆಚ್ ಕುಳಗಟ್ಟೆ
- ಚಂದ್ರಶೇಖರ್ ಕುಳಗಟ್ಟೆ
23 Dec 2016, 06:51 am
Download App from Playstore: