,,ವಿರಹದ ನಗು,,

ನಲಿವ ನೋವಿಗು ಸಾವಿದೆ ಕಣೇ
ಆ ಹೂವಿನ ಎಸಳುಗಳ ಒಮ್ಮೆ ನೋಡು
ಮತ್ತದೆ ಬೀದಿಯ ದುಂಬಿಗಾಗಿ ಹಾತೊರೆಯುತ್ತಿದೆ
ಒಲವ ಘಮವ ಕಣ್ಣಂಚಿನಲ್ಲೆ ಸೂಸುತ್ತ....

ಸುರಿವ ಮಳೆಹನಿಗೂ ಬೇಸರವಿದೆ ಕಣೇ
ಕಾಮನೆಯ ಕಾಮನಬಿಲ್ಲಿನೊಡನೆ ರಮಿಸಿದ ನೆನಪಿನಲ್ಲಿ
ಕಾರ್ಮೊಡಗಳ ಆಲಿಂಗನವ ನೆನೆದು
ಗುಂಪಾಗಿದ್ದ ಕನಸುಗಳು ಚೂರು ಚೂರಾಗಿ ಬಿದ್ದಿರುದ್ದಕ್ಕೆ....

ಆ ರಾತ್ರಿ ನಮ್ಮಿಬ್ಬರ ಸೇರಿಸುವ ಕನಸಿಗು ವಿರಹವಿದೆ ಕಣೇ
ಕಗ್ಗತ್ತಲೆಯ ಇಣುಕು ಬೆಳದಿಂಗಳಲ್ಲಿ ನಮ್ಮಿಬ್ಬರ
ಮಿಲನಕ್ಕೆ ಶಾಬೀತು ಮಾಡಿದ್ದ ಹರುಷ ಕನಸಿಗಿದೆ
ಆ ನಮ್ಮ ಭೇಟಿಯ ನಂತರ ಆದ ದಿಗ್ಭ್ರಮೆಯ ಶುಬೋದಯ ನೋಡಿ...

ಆಗಸದಲ್ಲಿ ಹೊಳೆವ ನಕ್ಷತ್ರಕ್ಕು ಮುನಿಸು ಇದೆ ಕಣೇ
ಮತ್ತದೆ ಚಹರೆಯಲ್ಲಿ ಮಿನುಗದ ಒಲವುಗಳ ಕಂಡು
ಭೂವಿಯಂತರಾಳವ ಹುಡುಕುತ್ತಾ ಮರದ ಕೊಂಬೆಯ
ಒಳನುಸುಕುತ್ತಲೆ ಅಡಗಿದ ಮೌನದ ಕತ್ತಲೆಯ ಕಂಡು....

ಸಂದೀಪ್ ಬಿ ಶೆಟ್ಟಿ ‌(ಸ್ಯಾಂಡೀ....).

- Sandeep B Shetty (ಸ್ಯಾಂಡೀ....)

23 Dec 2016, 07:15 am
Download App from Playstore: