ಕ್ಷಮಯಾಧರಿತ್ರಿ

ಆಸೆಗಳ ಅದುಮಿ
ನೋಟದಲ್ಲೆ ಚಿಮ್ಮಿ
ಕಣ್ಣಲ್ಲೆ ಮಾತಾಡುವವಳು

ನೋವಿದ್ದರೂ ತೊರದೆ
ಹೃದಯದಲೆ ತೊಳಲಾಡಿ
ತುಟಿ ಮೇಲೆ ನಗಾಡುವವಳು

ಕಲ್ಪನೆಯ ಲೋಕದಲಿ
ವರ್ಣನೆಗೆ ಮನಸೋತು
ಪ್ರೀತಿಯ ಬೇಡುವವಳು

ತನ್ನಿಷ್ಟಗಳ ಒಡಲ್ಕಟ್ಟಿ
ನಂಬಿಸಿದವರ ನಂಬಿ
ಜೀವನವಿಡಿ ತೊಳಲಾಡುವವಳು

- ವೆಂಕಟೇಶ್ ದೈಶಿ ವೇಮಗಲ್

23 Dec 2016, 08:20 am
Download App from Playstore: