ನಾನೊಂದು ಹೆಣ್ಣಾಗಿದ್ದರೇ

ನಾನೊಂದು ಹೆಣ್ಣಾಗಿದ್ದರೇ
ಜಗಕೆ ತಾಯಿಯಾಗಿರುತಿದ್ದೆ.

ಮಕ್ಕಳ ನೆಚ್ಚಿನ ಅವ್ವನಾಗಿರುತ್ತಿದ್ದೆ.
ಗಂಡನಿಗೆ ಪ್ರೀತಿಯ ಮಡದಿಯಾಗಿರುತ್ತಿದ್ದೆ.
ಕಷ್ಟವನ್ನು ಸಹಿಸುವ ಮಾನನಿಯಾಗಿರುತ್ತಿದ್ದೆ.
ನನ್ನವರ ತಪ್ಪುಗಳ ತಿದ್ದುವ ವಿರ್ಮಶಕಿಯಾಗಿರುತ್ತಿದ್ದೆ.
ಸಂಸಾರವನ್ನು ತಿದ್ದುವ ಗೃಹಿಣಿಯಾಗಿರುತ್ತಿದ್ದೆ.
ತಾಯ್ತನವ ಸಹಿಸುವ ಜನನಿಯಾಗಿರುತ್ತಿದ್ದೆ.
ನನ್ನವರ ಅಗಲುವಿಕೆಗೆ ಕಣ್ಣೀರುಹಾಕುತ್ತಿದ್ದೆ.
ಕೊನೆಗೊಂದು ದಿನ ಸಾಗರದಂತೆ ಎಲ್ಲ ಕಷ್ಟಗಳನ್ನು
ನನ್ನಲಿಟ್ಟು ಕೊಂಡು ಲೀನವಾಗುತ್ತಿದ್ದೆ.
ಆದರೆ ಗಂಡಾಗಿದ್ದೆನೆ.

ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿ
ಲೋಕದ ವ್ಯಂಗ್ಯಗಳಿಗೆ.ತಲೆ ಕೆಡಿಸಿಕೋಳ್ಳದ.ಬಂಡೆಗಲ್ಲಾಗಿದ್ದೆನೇ....

* ಗೌಡ್ರುಸರ್ಕಾರ್ *

- ಗೌಡ್ರುಸರ್ಕಾರ್

23 Dec 2016, 11:52 am
Download App from Playstore: