"ಅರಳು ಮಲ್ಲಿಗೆ"
___ __________________
ಮನಸ್ಸು ಮಲ್ಲಿಗೆ
ಅರಳು ಮಲ್ಲಿಗೆ
ನನ್ನದೆಯ ಬಾನಿನಲ್ಲಿ
ನಲುಗಿರುವ ಜೀವನದಲ್ಲಿ!
ಕಷ್ಟದ ಬಾಳಿನಲ್ಲಿ
ಕಲ್ಪನೆಯ ಕಾನನದಲ್ಲಿ
ಚೈತನ್ಯದ ಚಿಲುಮೆಯಾಗಿ
ಮಿನುಗುವ ತಾರೆಯಂತೆ!
ನೊವುಂಡ ಜೀವನದಲ್ಲಿ
ಕಮರಿದ ಕಂಗಳಲ್ಲಿ
ಭರವಸೆಯ ಶಿಖರವಾಗಿ
ಹುಣ್ಣಿಮೆಯ ಚಂದ್ರನಂತೆ!
ಕಳವಳದ ಬಾಳಿನಲ್ಲಿ
ಹೊಂದಿರುವ ಜೀವನದಲ್ಲಿ
ಪ್ರೀತಿಯ ಸೆಲೆಯಾಗಿ
ಭರವಸೆಯ ಭಾವವಾಗಿ!
___________________________
"ಬಸವಪ್ರಿಯ"
- ಬಲವಂತ ಮೋರಟಗಿ(ಬಸವಪ್ರಿಯ)
25 Dec 2016, 03:50 pm
Download App from Playstore: