ಮಂಜಿನ ಅಪ್ಪುಗೆ

ಮಾಘಿಯ ಮಂಜು
ಬುವಿಯ ಹೊದ್ದಿರಲು
ಗೂಡು ಹೊಕ್ಕ ಹಕ್ಕಿ
ರೆಕ್ಕೆ ಹೊದ್ದು ಕುಳಿತಿರಲು
ತರು ಲತೆ ಇಬ್ಬನಿಯ
ಕೂಡಿರಲು
ಜಗವು ಚಳಿಯಲಿ
ಮಿಂದಿರಲು
ಮುಸುಕಿದ ಮಂಜಿನ
ಅಪ್ಪುಗೆಯ ಮುತ್ತಿಗೆ
ಸೂರ್ಯನು
ಚಂದ್ರನಾಗಿ
ತಂಪಾಗಿ ಹೋದ

- ಸಂತೋಷ್ ( ರಾದೇ)

26 Dec 2016, 12:17 pm
Download App from Playstore: