ಸುಮತಿ ನೀ ಕೈಗೆಟುಕೆ ...

ಚಳಿಗೆ ಕೊಂಕದೆ
ಬಿಸಿಲಿಗೆ ಬತ್ತದೆ
ನಿನ್ನತನವ ಮೆರೆವ
ಸುಕೋಮಲ ಪುಷ್ಪವೆ ..
ನೀ ಹೊತ್ತು ತರುವ
ಸಂದೇಶ ಇದೆ ಅಲ್ಲವೆ
ಕೈಲಾಸವೆಲ್ಲಿ ಆಲಸಿಗೆ
ಆಯಸಿಗೆ ಅಮೃತವೆ ..
ಸುಮಧುರ ಸುಮವೆ
ನಿನ್ನೊಲಿಸಲು ನಿನ್ನರಸಿ
ಮರಳಿ ಮರಳಿ ಬರುವೆ
ಎಂದಿಗಾದರು ನಿನ್ನಂತೆ
ನಾನಾಗುವ ಹಂಬಲವೆ
ಸುಮತಿ ನೀ ಕೈಗೆಟುಕೆ ...

- Bharavi

27 Dec 2016, 09:21 am
Download App from Playstore: