ಸೋಲು-ಸಾವು

ಮಮತೆಯ ಮಾಧುರ್ಯಕೂ ಸೋಲಾಯ್ತು!
ನಾ ಸೋತಿದ್ದಲ್ಲ

ನಿಸ್ವಾರ್ಥ ಪ್ರೇಮಕೂ ಸಾವಿದೆ ಎಂದೇ ತಿಳಿಯಿತು
ನಾ ಸತ್ತಿದ್ದಲ್ಲ!

ಆ ದೈವ ರಾಮನೂ ಒಮ್ಮೆ ಸತ್ತು
ಹನುಮ-ಸಂಜೀವಿನಿಯೊಂದಿಗೆ
ಮತ್ತೆ ಉಸಿರಾಡಿದ!

ನಾನೂ ಕಾಯುತಿರುವೆ!
ನನ್ನ ಹನುಮನ?
ಮತ್ತವ ತರಲಿರುವ ಸಂಜೀವಿನಿಯ?

..............................................ಗರಿಮಾಮ

- Prasanna kumar K S

28 Dec 2016, 07:33 pm
Download App from Playstore: