ಶುಭರಾತ್ರಿ ಶುಭಾಶಯ
(ಓ ಹೃದಯಾ .....ಕೇಳಿದೇಯಾ)
ಶುಭರಾತ್ರಿ ಶುಭಾಶಯ ತಿಳಿಸುವಳೆಂದು
ಅವಳ ಕರೆಗಾಗಿ ಕಾದಿರಿವೆ
ಕೊನೆಗೂ , ಅವಳ ಉತ್ತರ
ಬಾರದೆ, ಮನ ನೊಂದಿದೆ ಇಂದು..
ನನ್ನವಳು ನನ್ನನು ಮರೆತು..!
ಸಂಗೀತ ಮನರಂಜನೆಯಲ್ಲಿ
ಭಾಗಿ ಆಗಿರುವಳು, ಇಂದು..!
ಬಹುಶಃ......
ಅವಳಿಗೆ ತಿಳಿಯದಾಯಿತೆ..!
ಅವಳಿಂದ ಇರುಳು, ಅವಳಿಂದ ರಾತ್ರಿ
ಅಂದುಕೊಂಡಿದ್ದ ನನಗೆ,
ಕರಾಳದಿನವಾಯಿತು ಇಂದು.
ಹೇಗೊ ಇದ್ದೆ, ಎಲ್ಲೊ ಇದ್ದೆ
ಅವಳ ಪ್ರೀತಿಯನು ಕಣ್ಮರೆ ಮಾಡಿ...
ಗೊತ್ತಿದ್ದು , ಗೊತ್ತಿದ್ದು....
ಎದೆಯಾಳದಲ್ಲಿ ಬಚ್ಚಿಟ್ಟ...
ಪ್ರೀತಿಯನು ನನಗೆ ತಿಳಿಯದೆ ,
ಬಡಿದೆಬ್ಬಿಸಿದಳು ಅವಳು.
ಅವಳೆ ,ಇಂದು....ನನಗೆ ಶುಭರಾತ್ರಿ
ಶುಭಾಶಯ ಕೋರುವದು
ಮರೆತು ಬಿಟ್ಟಳು...
ಅವಳಿಗೆ ತಿಳಿಯದಾಯಿತೆ..!
ನನ್ನ ಒಲವು ನನ್ನ ಉಸಿರು
ಅವಳೆ...ಎಂದು....
- Pb
29 Dec 2016, 05:35 am
Download App from Playstore: