ಕೊನೇ ಸಮಯ
ನನ್ನ ಕೊನೆಯ ಸಮಯ ಬಂದಿದೆ! ಎಂದೇ
ಇಚ್ಛೆಗೊಂಡು.....
ನಿನ್ಡೊಡನಿರುವೆ!
ಏನೂ ಮಾಡದೆ ಸುಮ್ಮನಿರು.
ಈ ಸಮಯದ ನಿನ್ನ ಸಂಗ
ನಿನ್ನ ಸನಿಹತೆ
ನನಗಿದೊಂದು ಯೋಗ
ಒಲವ ಸಾನಿಧ್ಯತೆ
ಅದೊಂದು ದಿನ
ನಮ್ಮಿಬ್ಬರ ಮಾತಿತ್ತು
ಎಲ್ಲಿಗಾದರೂ ಸರಿ
ಒಟ್ಟಿಗೆ ಹೆಜ್ಜೆಗಳನಿಡುವೆವೆಂದು
ಆದರಿಂದು ನನ್ನದೊಂದು ಬಿನ್ನಹ
ಕಾಲವಶಾತ್ ನನ್ನ ಸಮಯ ಬಂದಿದೆ
ಮುಂದಕ್ಕೆ ಎನ್ನನೊಬ್ಬನನೇ
"ನಗುತ ಕಳಿಸು; ನಿನಗಿನ್ನೂ ಸಮಯವಿದೆ"
ನಿನ್ನೊಡನಿದ್ದ ಸಂಸ್ಮರಣೆ
ಆ ಒಡನಾಟ
ಮುಚ್ಚಲಿರುವ ಈ ನನ್ನ
ಕಣ್ಣುಗಳಲಿನ್ನೂ ಹಸಿ-ಹಸಿಯಾಗೇ ಇದೆಯೋ.
ಆ ಮಧುರತೆ..
ಆ ನಿನ್ನ ಆರೈಕೆ...
ನಾ ಧನ್ಯನೋ-ಇಂತಹದು
ಅತಿ ವಿರಳರಿಗೆ ಸಿಗುವುದೋ
ಬಿಟ್ಟು ಹೊರಟೆನೆಂದು
ಧೃತಿಗೆಡದಿರು,
ನಿನ್ನ ಹೃದಯದಲಿ
ನಾನೆಂದೂ ಮಿಡಿಯುತಿರುವೆನೋ
ನನ್ನ ಅಗಲಿಕೆ
ಬರೀ ದೇಹ ವಿಚಾರದಿ
ಆದರೆ ನಾ ಅಮರನು
ನಿನ್ನೊಳಿರುವೆ, ನಿತ್ಯನಾಗಿ
ಈ ನಿನ್ನ ಅಳು-ರೋದನ,
ಈ ಬಿಕ್ಕಳಿಕೆಗಳ ತಡೆಯೋ
ಉಸಿರುಗಟ್ಟದಿರು
ನಿನ್ನ ಪ್ರತಿ ಉಸಿರಲೂ ನಾನಿರುವೆನೋ
ಆರನೂ ಕರೆಯದಿರು
ನೀನೊಬ್ಬಳೇ ಸಾಕು...
ಎನ್ನ ಭಾವೋತ್ಕರ್ಷಕೆ!
ನನ್ನ ಚಿರಮೌನಕೆ....
ನಿನ್ನೀ ಹೃನ್ಮನ,ತೊಡೆಗಳೇ ಇಂದು ವೈಕುಂಠ;
ಹೋಗಿ ಮತ್ತೆ ಬರುವೆ ನಾನು
ಅನುಕ್ಷಣ, ನಿನ್ನೊಲವ ಕಾತರದಲಿ.....
ನಿನ್ನ ಸಹಯೋಗ ನಿರೀಕ್ಷೆಯಲಿ.....
.............ಗರಿಮಾಮ'
- Prasanna kumar K S
30 Dec 2016, 12:44 am
Download App from Playstore: