ತಿಳಿಯದಾದೆನನು ನಿನ್ನ ಹೃದಯವ (ಓ ಹೃದಯಾ ♡ ಕೇಳಿ

ನೀನಾದೆ ಮಿಡಿತ ನೀನಾದೆ ತುಡಿತ
ನನ್ನನ್ನು ಸೆಳೆದು
ಹೃದಯದ ಬಡಿತವಾಗಿರಲು
ಯಾಕೆ ಹೇಳುವೆ...
ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ

ನೀ ದೂರವಾದರೆ ಬಡಿತವೆ ನಿಂತಂತೆ
ಏನಿದೆ ಹೇಳೇ ಆ ನಂತರ
ಬರೇ ಶೂನ್ಯ ಶೂನ್ಯ ಶೂನ್ಯ
ಯಾಕೆ ಹೇಳುವೆ...
ಮರಳಿ ಹೋಗು ಎಂದು
ತಿಳಿಯದಾದೆನು ನಾ
ನಿನ್ನ ಹೃದಯವ

ಆಡೊ ಮಾತಿನಲ್ಲಿ ಪ್ರೀತಿಯಿದೆ
ಇರೊ ಸಲುಗೆಯಲ್ಲಿ ಒಲವಿದೆ
ಕಂಗಳೆರಡು ಬೆರೆತಿರಲು
ಯಾಕೆ ಹೇಳುವೆ...
ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ

ಮನವ ಬಿಚ್ಚಿ ನನ್ನಲಿ
ನೀ ಬೆರೆತು ಹೋದೆ
ಯಾವ ಪರಿವೆಯಿಲ್ಲದೆ
ನನ್ನ ಪ್ರೇಮಿಸಿದೆ,
ಮನಸುಗಳೆರಡು ಬೆಸೆಯಲು
ಯಾಕೆ ಹೇಳುವೆ...
ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ

ತೇಲಿ ಬಂದೆ ಅಲೆ ಅಲೆಯಾಗಿ
ನನ್ನ ಜೀವನದ ಸಾಗರದಿ
ಕೊಟ್ಟೆ ಹರುಷ ಪರಿ ಪರಿಯಾಗಿ
ನನ್ನುಸಿರಿಗೆ ನಿನ್ನುಸಿರು ಬೆರೆಸಿ
ದೇಹಗಳು ಒಂದಾದಾಗ
ಯಾಕೆ ಹೇಳುವೆ... ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ...
 
ನಮ್ಮಿಬ್ಬರ ಮೊದಲ ಮಿಲನ 
ಏಳೇಳು ಜನುಮಕೆ
ಮರೆಯದ ಕ್ಷಣವಾಗಿರಲು
ನಿನ್ನಲ್ಲಿ ಬೆರತು
ನನ್ನ ನಾ ಮರೆಯಲು
ಯಾಕೆ ಹೇಳುವೆ... ಮರಳಿ ಹೋಗು ಎಂದು
ತಿಳಿಯದಾದೆನನು ನಾ
ನಿನ್ನ ಹೃದಯವ...

- Pb

31 Dec 2016, 07:13 am
Download App from Playstore: