ವಿದಾಯ
ನಿಂತಿರುವೆ ಆಗಸಕೆ ಕಣ್ನೆಟ್ಟು
ಹೊಸ ಕಿರಣದ ಆಗಮನಕೆ
ಈ ಇರುಳಿಗೆ ಹೇಳಿ ವಿದಾಯ
ಮುಚ್ಚಿದ ಕಂಗಳಲಿ ಕಾಣುತ್ತಾ
ಹೊಂಗನಸೊಂದು ಸುಂದರ
ಬೇಡದ ದುಮ್ಮಾನಕೆಹೇಳಿ ವಿದಾಯ
ಬೇರೇನೂ ಕೇಳೆ ನಾ ದೇವಾ
ಕೃಪೆ ಇರಲಿ ಸದಾ ನಮ್ಮ ಮೇಲೆ
ಹೊಸ ವರ್ಷ ತರಲಿ ಸುಖ ಸಕಲರಿಗೆ
ಬಾ ಎಂದು ಕರೆಯುತ ನವವರ್ಷವ
ಹೇಳುತ್ತಾ ಹಳತಿಗೆ ವಿದಾಯ
ವಿದಾಯ ವಿದಾಯ.....
ಕವಿ ರಾಜ
- kavita Rajesh
31 Dec 2016, 11:24 pm
Download App from Playstore: