ಹದಿನಾರ(2016)ರ ಹಳಹಳಿ
ನನ್ನೋಲುಮೆಯ ಹದಿನಾರ
ನೀ ಬಿಟ್ಟು ಹೋದ ನೆನಪು
ನೂರಾರ
ಬಲು ತೋರಿದೆ ಕರುಣೆ
ಮರೆಯಲಾರೆ ನಿನ್ನ ಸ್ಮರಣೆ||
ಜೋಡಿಯುಸಿರಿಗೊಂದ
ಉಸಿರು ಸೇರಿಸಿದಿ.
ಉಸಿರಿನಿಂದ
ಹಸಿರು ಸ್ಪುರಿಸಿ
ಹರಸಿದಿ |
ಕೆಟ್ಟ ಹಸಿವು
ಸುಟ್ಟ ಭಾವಕೆ
ಅಮೃತ ಉಣಿಸಿ
ತನಿಸಿದಿ
ಬೆಟ್ಟದಷ್ಟು ಭಾವ
ತುಂಬಿ
ನಮ್ಮನೆಲ್ಲ ಕುಣಿಸಿದಿ|
ಹದಿನಾರ ಬಲು ಹಳ ಹಳಿ
ನನಗ
ನೆನಪು ನೂರಾರ
ಅನನ್ಯ ಧನ್ಯವಾದ ನಿನಗ
ಹೊಸ ಸ್ನೇಹ ಕೊಟ್ಟಿ
ಹಳೆ ಸ್ನೆಹ
ಉಳಿಸಿದಿ
ಗಟ್ಟಿ ಮುಟ್ಟಿ
ಪ್ರೀತಿ-ಸ್ನೇಹದಿಂದ
ತುಂಬಿದೆ ಎದೆಯ ಕಟ್ಟಿ|
ಬರುವ ವರುಷ ಶುಭವ ತರಲಿ
ಸ್ನೇಹ ಕೊಂಡಿ ಗಟ್ಟಿ ಇರಲಿ
ಹೃದಯ ತುಂಬ ಪ್ರೀತಿಯಿರಲಿ
ಜಗದ ತುಂಬ ನಗುವೆ ಇರಲಿ.|
- bharatakumar
01 Jan 2017, 07:15 am
Download App from Playstore: