ಕೊನೆಯ ಕವನ...
(ಓ ಹೃದಯಾ ♡ ಕ
ಹೇಳಬೇಕಾಗಿದ್ದ ಮಾತು
ಮನದಲ್ಲೇ ಉಳಿದಿತ್ತು ...
ಈಗ ತಾನೇ ಅರಳಿದ ಪ್ರೀತಿ
ಮೊಳಕೆಯೊಡೆಯುವ ಮುಂಚೆ
ಸತ್ತು ಹೋಗಿತ್ತು ....
ಮಾತು ಮೌನಕ್ಕೆ ತಿರುಗಿತ್ತು
ಅರಿವೇ ಇಲ್ಲದಂತೆ
ಮನದಲಿ ಏನೊ ದುಗುಡ
ಹೇಳಲಾಗದ ತಳಮಳ ... !!!
ಕೈಗೆ ಸಿಗುವ ಮೊದಲೇ
ಹಾರಿ ಹೋದ ಗಿಣಿಮರಿಯಂತೆ
ಕಂಡೆ ನೀನು......
ಬರಿದಾದಂತೆ ತೋರುತಿದೆ
ನನ್ನ ಕೈಗಳು
ಖಾಲಿ ಕೈಯನ್ನೇ
ನೋಡುತ್ತಾ ಕುಳಿತೆ ...
ಅದು ನಿನಗಾಗಿ ಬರೆದಿತ್ತು
ಈ ಕೊನೆಯ ಕವನ .........
- Pb
01 Jan 2017, 03:08 pm
Download App from Playstore: