ನೀನಿಲ್ಲದೆ... (ಓ ಹೃದಯಾ ♡ ಕ

ನೀನಿಲ್ಲದೆ ನನಗೇನಿದೆ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲ ಕಣ್ಣಲ್ಲೇ ಸೆರೆಯಾಗಿದೆ
ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ಕಹಿಯಾದ ವಿರಹದ ನೋವು
ಹಗಲಿರುಳು ತಂದೆ ನೀನು
ಎದೆಯಾಸೆ ಏನು ಎಂದು
ನೀ ಕಾಣದಾದೆ
ನಿಶೆಯೊಂದೆ ನನ್ನಲ್ಲಿ
ನೀ ತುಂಬಿದೆ
ಬೆಳಕೊಂದೆ ನಿನ್ನಿಂದ
ನಾ ಬಯಸಿದೆ
ಎಲ್ಲಾ ಕಳೆದುಕೊಂಡರು 
ಇನ್ನೂ ಏನೋ
ನನ್ನ ಜೊತೆ ಇರುವಂತೆ 
ಕಣ್ಣುಗಳ ಮುಚ್ಚಿ ಕೇಳಲು 
ಬಡಿತವು ಪಿಸುಗುಟ್ಟಿತು 
ಅದು ನಿನ್ನ ಉಸಿರೆಂದು
ಹಸಿರಾಗಿ ಇನ್ನೂ ಈ ಕಣ್ಣೊಳಗೆ 
ಕಾರಂಜಿಯಾಗಿ ಕಂಡಿದೆ ಇಂದು....
ನೂರಾರು ಭಾರಿ 
ಸಾವಿರ ದಾರಿ ಹುಡುಕಿದರೂ 
ಮತ್ತೆ ಕಂಡಿಲ್ಲ ನಿನ್ನನು
ನೀನು ಬರುವೆ ಎಂಬ
ಸಣ್ಣ ಆಸೆಯಿಂದ
ಬಡಿಯುವ ಈ ಹೃದಯದ ಜೊತೆ
ದಾರಿ ಕಾಯುತ ಕುಳಿತಿರುವೆ 
ನಿನ್ನ ಸವಿಗನಸಲ್ಲಿ ಇಂದು.... 

- Pb

01 Jan 2017, 07:02 pm
Download App from Playstore: