ಬಳ್ಳಿಯಿರಬೇಕು...

ಬಳ್ಳಿಯಿರಬೇಕು ಮರವೊಂದಕೆ
ದುಃಖ ದುಮ್ಮಾನ ತೋಡಿಕೊಳ್ಳಲು.
ಬಳ್ಳಿಯಲಿ ಅರಳಿದ ಹೂವೆ ಕನ್ನಡಿ,
ತನ್ನ ಮುಖವ ತಾನೇ ನೋಡಿಕೊಳ್ಳಲು

ಬೇಸರದಲಿ ಮರ ಎಲೆಯುದುರಿ,
ಮನಸು ಮುದುರಿ ಮರುಗುವ ಹೊತ್ತಲಿ
ಬಳ್ಳಿ ತಾ ಬಳಸಿ ನಲ್ಲನ ಎದೆಗಾನಿಸಿ ತಂಪೆಲೆಯ
ಹಿತ ಮುದ್ದಿನ ಮುದ್ರೆಯೊತ್ತಿ
ನೋವ ಮರೆಸಲು.

ಬುಜಕೆ ಆನಿಸಿ ತರು ಲತೆಯ
ಸ್ಪುರಿಸಿ ಬಿಸಿಯುಸಿರ ಚಿತೆಯ
ಚೆಲ್ಲುವಳಿರಬೇಕು ಮರವೊಂದಕೆ
ತನ್ನ ಬದುಕು ಅಮರವಾಗಲು.

- ಶ್ರೀಗೋ.

01 Jan 2017, 10:32 pm
Download App from Playstore: