ಹೂದೋಟದ ಚೆಲುವೆ

ಹೂದೋಟದಲ್ಲಿ ನನ್ನ‌ ಚೆಲುವೆ ಇದ್ದಳು
ರಾತ್ರಿಯಲ್ಲಿ ನನ್ನ ನೋಡಿ ನಕ್ಕಳು!!

ಹೊಳೆಯುತ್ತಲಿರುವ ನಕ್ಷತ್ರದಂತೆ ಕಂಗಳು
ಇರುಳಿನಲ್ಲಿ ಬೆಳಕ ಹೊತ್ತು ಬಂದಳು!!

ಇಗೋ ತಕೋ ಈ ವಲವಾ ಸಖ
ಎಂದು ನನ್ನ ಎದಿರು ಬಂದು ನಿಂತಳು!!

ರಾತ್ರಿಯಲ್ಲಿ ಬೆಳಗ ಬಂದ ಚಂದಿರ
ಇವಳ ಅಂದ ಕಂಡು ತಾನು ಮರುಗಿದ!!

ನನ್ನ ಅಂದ ಮೀರೋ ಚಂದವನ್ನು ಈ
ಭೂಮಿಯಲ್ಲಿ ಯಾರು ತಂದರು ಎನ್ನುತ!!

ಇವಳ ಕಂಡ ಮೇಲೆ ನನ್ನ ಹೃದಯಕೆ
ಪ್ರೀತಿಯಲ್ಲಿ ಜಾರಿ ಬೀಳೊ ಬಯಕೆಯು!!

ಬಾರೆ ಇಲ್ಲಿ ಚಂದ್ರಮುಖಿ ನನ್ನ ವಲವೂ
ಕೂಡಾ ನಿನ್ನದೇ ಸಖಿ ಎಂದೆನು!!

- ಪಿ.ಜಿ.ಜ್ಯೋತಿ

04 Jan 2017, 03:29 pm
Download App from Playstore: