ಕಾಗಕ್ಕ ಧ್ವನಿ ಒಡೆದೋಯಿತು

ನಾನೊಂದು ಕಾಗಕ್ಕ
ನಮಸ್ತೆ ಹೇಳಿರಿ ಅಕ್ಕಾ
ದುಡಿಯುತ್ತಿರುವ ವರ್ಷದ ಲೆಕ್ಕ
ಮನ್ನಣೆ ನೀಡಿರಿ ಅಕ್ಕಾ

ಕೋಗಿಲೆ ಧ್ವನಿಗೆ ಮಾರುಹೋಗ ಬೇಡಿ
ಅದು ವಸಂತ ಮಾಸದ ಗಾನ
ನನ್ನ ಧ್ವನಿಗೆ ದೂರು ಸಲ್ಲಿಸ ಬೇಡಿ
ಇದು ವರ್ಷದ ಸೃಜನ

ಜಾತಿಗೆಟ್ಟವನು ನಾನು
ಧರ್ಮ ಮೀರಿದವನು ನಾನು
ಹಾಗಾದರೆ ಯಾರವನು ನಾನು?
ವಿಶ್ವಮಾನವತೆಯ ಜೇನು!

ವಿಶ್ವ ಪಥದ ದಾರಿಗೆ
ಶಾಂತಿಯ ಜೀವಿಗೆ
ಕರುಣೆಯ ಮಾತೆಗೆ
ಶರಣು ಶರಣು ಎನ್ನವೆ
ನನ್ನ ಮನದಲ್ಲಿ ಕಾಣವೆ

ಬದಲಾವಣೆ ಕಾಲ ಬಂದಿದೆ
ಪ್ರಚಂಡ ಪ್ರಕಾಶದಲ್ಲಿ ಕರಿ ನೆರಳನುಂಗಿದೆ
ಚಿಗುರಿಸ ಬೇಡಿ ಜಾತಿ ಭೇದ ಭೀತಿ
ಭರವಸೆಯ ಸುವಾಸನೆ ಮೂಡಿದ ಶಾಂತಿ.

- Shinan

04 Jan 2017, 04:10 pm
Download App from Playstore: