ನೆನಪುಗಳು....

ನೆನಪುಗಳು ನಿನ್ನಾ
ನೆನಪನ್ನ ಅಲಂಕರಿಸಿ ಹೊಗಳುತಿಹವು
ನೋವುಗಳು ಇದ ನೋಡಿ
ಅವೇ ನೊಂದು ಓಡುತಿಹವು
ಕೊಂಡಾಡಿ ಮುದ್ದಾಡಿದಾ
ಸವಿ ರಸಭರಿತ ಆ ಕ್ಷಣಗಳು
ಮರುಕಳಿಸುವ ಸೂಚನೆ ಕೊಡುತ
ನಿನ್ನೀ ಕುಡಿನೋಟ ನನ್ನೆದೆ ನಾಚುತಿಹವು
ಖುಷಿಯು ಅದೇಕೋ
ಮುದವು ಜೊತೆ ಹಿತವು
ಅದೇಕೋ ಹೊಸ ಹುರುಪು ತರುತಿಹುದು
ಕಾಣದ ಛಾಯೆ ಸೆಳೆಯುತಿಹುದು
ತನ್ನೆಡೆಗೆ ಬಾಚಿ ಎಳೆದೆಳೆದು ಕೊಂಡೊಯ್ಯುತಿಹುದು....

- ವಿಧಾತ್ರಿ ಹರಿತಸ್ಯ

05 Jan 2017, 09:02 am
Download App from Playstore: