ಓ ಹೃದಯಾ ♡ ಕೇಳಿದೆಯಾ
ನೀ ಇರುವೆ ನನ್ನಿಂದ ದೂರ,
ಮನ ನಿನ್ನನ್ನೆ ಬಯಸಿ, ಆಗಿದೆ ಬಾರ
ನಿನ್ನ ನೋಡದೆ ನಾನು ಇರಲಾರೆನೆ...
ಕಷ್ಟವಾಗುತಿದೆ ನಿನ್ನ ಜೊತೆ
ಕಳೆದ ದಿನಗಳನು ನೆನದು...
ಮನದಲಿ ಬಯಕೆಯೊಂದು ಮೂಡಿತ್ತು
ಅನಿಸಿತು ಆಗ ನೀ ಇರಬೇಕಿತ್ತು
ನನ್ನ ಹತ್ತಿರ ಎಂದೆಂದಿಗೂ
ಕಣ್ಮುಂದೆ ಸುಳಿಯುತಿದೆ
ನಿನ್ನದೆ ಬಿಂಬ
ನಿನ್ನದೆ ನಶೆಯು
ಮೈ ಮನ ತುಂಬ
ಬಲವಾಗುತಿದೆ ಹಂಬಲ
ಮತ್ತೆ ನೋಡಲು
ನಿನ್ನ ಪ್ರತಿಬಿಂಬ
ಆಗುತಿಲ್ಲ ಓ ನನ್ನ ಚಿನ್ನ
ಬಿಟ್ಟಿರಲು ನಿನ್ನ
ತಿಳಿಯದಾಗಿದೆ ಮನಕೆ ಮಾಡುವದೆನೆಂದು
ಗೊಂದಲದಲಿ ಸಿಲುಕಿದೆ ಮನ ನೊಂದು
ಮನಸ್ಸಿಲ್ಲದ ಮನಸ್ಸಿಂದ
ಇರುವೆ ದೂರ ನಿನ್ನಿಂದ
ನೀ ಕೊಟ್ಟ ಸಿಹಿ
ಮುತ್ತು ನೆನಪಾಗಿದೆ
ಬೆಚ್ಚನೆಯ ಅಪ್ಪುಗೆಯು ಬೇಕಾಗಿದೆ
ಇನ್ನೇನು ಮಾಡುವುದು
ನಿನ್ನ ನೆನೆಯುತ ಕುಳಿತೆ
ನನ್ನೆಲ್ಲಾ ಕೆಲಸಗಳ
ನಾನಲ್ಲೇ ಮರೆತೆ....
ಹೇಳುವದು ಬಹಳವಿದೆ
ಹೇಳಲಾಗುವುದಿಲ್ಲ
ಹೇಳದೆ ಉಳಿದದ್ದು
ಎದೆಯಲಿ ಲೆಕ್ಕವಿಲ್ಲ
ಕಣ್ಣುಗಳು ಕಾದಿವೆ
ನಿನ್ನ ನೋಡಲು
ವಿರಹದ ನೋವಲ್ಲಿ ಬೆಂದಿದೆ
ಈ ಹೃದಯ
ದಿನೇ ದಿನೇ ಕಾಡುತಿವೆ
ಬಗೆ ಬಗೆಯ ಕನಸು
ನೀ ಬಳಿ ಇದ್ದರೆ
ಬದುಕೆಸ್ಟು ಸೊಗಸು
ಎಲ್ಲ ಬಿಟ್ಟು ನಿನ್ನ ಬಳಿ ಬರಲೆ
ನೀ ನಿನ್ನ ತೋಳಲಿ ಬಳಸಿ
ಬಿಸಿ ಅಪ್ಪುಗೆಯ ನೀಡಿ
ವಿರಹದಲ್ಲಿ ನೊಂದಿರುವ
ನನ್ನ ಜೀವವ ಉಳಿಸು
- Pb
05 Jan 2017, 10:51 am
Download App from Playstore: