ಓ ಹೃದಯಾ ♡ ಕೇಳಿದೆಯಾ
ಡೈರಿಯ ಪುಟಗಳಲಿ
ನಾ ಬರೆದಿರಲು ಮನದ ಮಾತು
ನನ್ನಾಕೆ ಓದಿದಳು
ಪುನಃ ತೆರೆದು ತೆರೆದು
ಡೈರಿಯಾಯಿತೇ
ಏಕಾಂಗಿ ನೀ ತೊರೆದು ಹೋದಾಗ
ಇನ್ನು ಯೋಚಿಸುತಿರುವೆ
ತಲೆ ಕೆರೆದು ಕೆರೆದು
ಮನದ ಭಾವನೆಗಳನು
ಬರೆದಿದ್ದೆ ಉಳಿದಿಲ್ಲ ಗುಟ್ಟು
ನಾ ನಿನ್ನ ಪೂಜಿಸಿದ್ದೆ
ಹೃದಯದಲಿ ಇಟ್ಟು
ನಿ ಏಕೆ ಇರುವೆ ದೂರ
ನನ್ನನ್ನು ಬಿಟ್ಟು
ನೀ ಹೇಗಿರುವೆ
ನನ್ನ ಏಕಾಂಗಿಯಾಗಿಟ್ಟು
ಅದೇನು ಓದಿದೆ
ನೀ ನನ್ನ ಡೈರಿಯಲ್ಲಿ
ಹೇಳಬಾರದೇ ನನಗೆ
ನೇರ ಮಾತಿನಲ್ಲಿ
ಮುಚ್ಚಿಟ್ಟುಕೊಂಡಿರುವುದೇನು
ಮನಸ್ಸಿನಲ್ಲಿ ತಿಳಿದುಕೊಳ್ಳುವ
ಆತುರ ಹುಟ್ಟಿದೆ ಮನದಲಿ
ನಿನ್ನ ಪ್ರೀತಿಯ ಸಾಗರದಲ್ಲಿ
ಹರುಷದಿ ತೇಲಿದೆ ಅಂದು
ನಿನ್ನಗಲಿಕೆಯ ವಿರಹದ
ನೋವಿನಲ್ಲಿ ಬೆಂದಿರುವೆ ಇಂದು
ನನಗಾಗಿ ಸಮಯವಿಲ್ಲವೆ
ನಿನ್ನ ಬಳಿ ಇಂದು
ದೂರವಿದ್ದರು ನೀ ಇರುವೆ
ನನ್ನ ಮನದಲ್ಲಿ ಎಂದೆಂದೂ
- Pb
05 Jan 2017, 11:47 am
Download App from Playstore: