ಓ ಮನಸ್ಸೆ ♡ ಮನಸೆ
ಅದೆಷ್ಟೋ ಭಾವನೆಗಳ
ತುಂಬಿ ಕೊಂಡಿರುವ
ಹೊಸ ಹೊಸ ಕನಸುಗಳ
ಕಟ್ಟಿ ಕೊಂಡಿರುವ
ಕನಸು ನನಸಾಗಿಸಲು
ಪ್ರೇರೆಪಿಸುತಿರುವ
ನಗು ಬಾರದಿದ್ದರೂ
ಮುಗುಳ್ನಗೆಯ ಬೀರುವ
ಅಳಲಾಗದಿದ್ದರು
ಒಮ್ಮೊಮ್ಮೆ ಅಳುವ
ತಪ್ಪು ಸರಿಗಳನೆಲ್ಲ
ಜೀರ್ಣಿಸಿ ಕೊಂಡಿರುವ
ಬದುಕಿನ ದಾರಿಯಲಿ
ಮುಖವಾಡವ ಧರಿಸಿರುವ
ಓ ಮನಸ್ಸೇ ನೀನೆಷ್ಟು ಕಠಿಣ ..........
- Pb
05 Jan 2017, 01:14 pm
Download App from Playstore: