ಓ ಹೃದಯಾ
ತರಕಾರಿ ತರಲು ಹೋಗಿರುವಳು
ನನ್ನ ಚೆಲುವೆ ಸುಡು ಬಿಸಲಲಿ
ಯಾರಿಲ್ಲವೆ ಅಲ್ಲಿ ನೆರಳಾಗಿ
ಕೊಡೆ ಹಿಡಿಯಲು
ಚಡಪಡಿಸುತಿದೆ ಈ ಮನ
ಹೇಗಿರುವಳು ನನ್ನ ಚೆಲುವೆ ಎಂದು
ಅನಿಸುತಿದೆ ಈ ಮನಕೆ ಇಂದು
ಮೋಡ ಕವಿದು ಮಳೆ ಹನಿಯಾಗಿ
ಸುರಿಯಲೆ ಅವಳ ಮೇಲಿಂದು
ಮಳೆ ಹನಿಯಿಂದ ಅವಳ
ಪಾದಗಳಿಗೆ ಕಚಗುಳಿ
ಇಡುತ ಹೇಳಿಬಿಡಲೆ
ನಿನ್ನನು ಎಷ್ಟೊಂದು
ಪ್ರೀತಿಸುವೆ ಎಂದು...
ನಿನ್ನ ಇಂಪಾದ ದನಿಗಾಗಿ
ಹಾಗೂ ಮಧುರ
ಸಂಗೀತದಂತೆ ತೇಲಿ ಬರುವ
ನಿನ್ನ ಮಾತುಗಳ ಕೇಳಿದಾಗ
ಹೃದಯ ಬಡಿತ ಹೆಚ್ಚಾಗುವದು
ನಿನ್ನ ನೆನಪಿಸಿಕೊಂಡಾಗ
ಹುಚ್ಚರಂತೆ ಕುಣಿಯುವೆನು
ನಿನ್ನ ಬಿಟ್ಟು ಇರಲಾರೆ,
ಬಿಟ್ಟು ಬದುಕಲಾರೆ ಎಂದು...
- Pb
05 Jan 2017, 02:00 pm
Download App from Playstore: