ಹೇಳದ ಹಳೆಯ ಕ್ಷಣ (ಓ ಹೃದಯಾ ♡ ಕೇಳಿದೆಯಾ)

ಇಪ್ಪತ್ತೆರಡು ವರ್ಷಗಳ ಹಿಂದೆ
ನೀ ನನ್ನ ಜೀವನದಲಿ ಬಂದೆ
ಏರುಪೇರಾಗಿತ್ತು ನನ್ನೆದಯೆ ಬಡಿತ
ನಿನ್ನ ನಗುವ ಕಂಡು…
ಅಂದು ನಿನ್ನ ನೋಡಿ ನಾ ನಕ್ಕೆ
ನನ್ನ ನೋಡಿ ನೀ ನಕ್ಕೆ
ಅಂದೇ ನಮ್ಮಿಬ್ಬರ ಕಣ್ಣಗಳ
ಮಿಲನವಾಯಿತು
ನಿನ್ನ ಮುಗ್ಧ ಮನಸ್ಸು
ಆ ಕೆಂದುಟಿಯ ನಗು
ಏನೋ ಹೇಳ ಹೊರಟಿರುವ
ಮೀನಿನಂತಹಾ ನಿನ್ನ ಕಣ್ಣುಗಳು
ಇವೆಲ್ಲವುಗಳಿಂದ ನಾ
ನಿನ್ನ ಬಳಿಗೆ ಆಕರ್ಷಿತನಾದೆ
ನಿನಗೇನೋ ಹೇಳಬೇಕೆಂದು
ನನ್ನ ಮನ ಹಂಬಲಿಸಿತು
ನಿನಗೆ ಹೇಳುವ ದಾರಿಗಳನು
ನಾ ಹುಡುಕಿದ್ದೆ ನೂರು
ನನ್ನ ಮನದ ಹಂಬಲ ಹೇಳದೆ
ನೊಂದಿತ್ತು ಈ ಮನ
ನಿನ್ನ ಮೌನದ ಮಾತೊಂದು ಕಂಡು
ಆ ಮಾತಿನಲ್ಲಿ ನಿನ್ನ ಒಲವನ್ನು ಕಂಡು
ಹಗಲಿರುಳು ನಿದ್ದೆ ಬಾರದೆ
ಚಡಪಡಿಸುತಿತ್ತು ಈ ಮನ
ನಿನ್ನ ಕಂಡಾಗಲೆಲ್ಲ
ಈ ಮನದಲ್ಲಾಗುವ ರೋಮಾಂಚನ..
ಪುಸ್ತಕದ ಕೊನೆಯ ಪುಟದಲಿ
ನಿನ್ನ ಹೆಸರನು ನನ್ನ ಹೆಸರೊಡನೆ
ಕೂಡಿಸಿ ಬರೆದು ನನ್ನ ಪ್ರೇಮಕೆ
ಮುನ್ನುಡಿ ಬರೆದ ಕ್ಷಣ..
ಅದೆಷ್ಟೇ ನಿನ್ನ ನೋಡಿದರೂ
ನಿನ್ನ ಹಿಂಬಾಲಿಸುವದು
ಬಿಡದ ಆ ನನ್ನ ತುಂಟತನ..
ಬಚ್ಚಿಕೊಂಡು ನಿನ್ನ ಮುದ್ದು ನಗುವ
ನೋಡುವ ಹುಚ್ಚುತನ..
ಕಂಡರು ನನ್ನ ಕಾಣದಂತೆ
ಹಿಂತಿರುಗಿ ನೀ ನೋಡಿ ನಗುವ
ಒಲವಿನ ಕಣ್ಣು ಮುಚ್ಚಾಲೆ ಆಟ
ಆ ಆಟದಲಿ ನಮ್ಮ ಮನಸಿನ
ಭಾವನೆಗಳು ವಿನೂತನ..
ನಿನ್ನೊಡನೆ ಅನುಭವಸಿದ ಕ್ಷಣ
ಹೇಳಲಾಗದೆ ಹೇಳಿರುವೆ ಇಂದು
ಹೇಳದ ಹಳೆಯ ಕ್ಷಣಗಳನು..
ಪದಗಳಲಿ ಗೀಚಿದೆನು ಕವನ ರೂಪದಲಿ
ನಗುತ ನಿನ್ನ ನೆನೆಯುತಾ ಪ್ರತಿದಿನ… 

- Pb

08 Jan 2017, 08:03 am
Download App from Playstore: