ಗುರುವಿಗೆ
ಅಕ್ಕರೆಯಿಂ ಅಕ್ಕರವಂ ನುಡಿಸಿದವಗೆ
ಎನ್ನೊಳಗಿನ ಎನ್ನಂ ಬಿಡಿಸಿದವಗೆ
ಒಲವಿನಿಂ ತಿದ್ದಿ ತೀಡಿದ ಯೋಗಿಗೆ
ಎನ್ನನುದ್ಧರಿಸಿದ ಆ ದಿವ್ಯ ಚೇತನಕೆ
ಅಜ್ಞಾನದಿಂ ಸುಜ್ಞಾನದೆಡೆಗೆ ಕರೆತಂದವಂಗೆ
ಸರ್ವವಂ ಧಾರೆ ಎರೆದ ತ್ಯಾಗಮೂರ್ತಿಗೆ
ತನ್ನಂ ಮರೆತು ಮಾಡುವ ನಿಸ್ವಾರ್ಥ ಸೇವೆಗೆ
ಜೀವನವಂ ತೋರಿದ ಮಾರ್ಗದರ್ಶಕನಿಗೆ
ಶಿಷ್ಯನೋಳ್ ತಾ ಮೆರೆದ ಸಾತ್ವಿಕನಿಗೆ
ಅರಿವಂ ಪೊಸಯಿಸುವ ಮೇಧಾವಿಗೆ
ಜ್ಞಾನಭಂಡಾರದ ಒಡೆಯನಿಗೆ
ಶ್ರೀ ಸರಸ್ವತಿಯ ವರಪುತ್ರನಿಗೆ
ತಮದಿಂ ಕರೆತಂದ ದಿವ್ಯ ಜ್ಯೋತಿಗೆ
ಜಗದ ಕೀರ್ತಿಗೆ ಪಾತ್ರನಾದ ಪರಮಜ್ಞಾನಿಗೆ
ಸಮಾನತೆಯಂ ತೋರಿದ ಸಾರ್ಥಕತೆಗೆ
ಮೌಲ್ಯಗಳಂ ತುಂಬಿದ ಮಾನವತೆಗೆ
ವಿಶ್ವವಂ ಪರಿವರ್ತಿಸಬಲ್ಲ ಆ ಶಕ್ತಿಗೆ
ಮಣಿಯುವೆನು ನಾನೆಂದು ಚಿರಮುಕ್ತಿಗೆ
ಏನ ನೀಡಲಿ ನಾನು ಗುರುಭಕ್ತಿಗೆ?
ಇನ್ನಾವುದೆಣೆಯುಂಟು ಆ ಪ್ರೀತಿಗೆ
ಪೊರೆದು ಬೆಳೆಸಿದ ಎನ್ನೆಲ್ಲ ಪ್ರಿಯ ಗುರುವಿನ ಚರಣಕಮಲಗಳಿಗೆ
ಈ ನಿಮ್ಮ ಪ್ರಿಯ ಶಿಷ್ಯನ ಅನಂತ ಅನಂತ ಅನಂತ ವಂದನೆ
- Kumara.C
09 Jan 2017, 07:57 pm
Download App from Playstore: