ಜೀವನ

ಮರಳುಗಾಡಿನಂತೆ ಜೀವನ
ಮರಳುಗಾಡು ದಾಟಿ ಹೋಗಲೇ ಬೇಕೆಂಬ ಹಂಬಲ.
ಕನಸೆಂಬ ಬಾಯಾರಿಕೆಯ ತಣಿಸಲು
ನೀರಿಗಾಗಿ ಹುಡುಕಾಡುವುದೇ ನಿಜ ಕಾಯಕವಿಲ್ಲಿ
ಸಿಕ್ಕೇ ಬಿಟ್ಟಿದೆ ನೀರು ಸಮೀಪಿಸೆ ಬಿಟ್ಟಿರುವೆ ನೀರಾಡಿಕೆಯ ತನಿಸಿಕೊಳ್ಳುವ ಕ್ಷಣವ ಎಂದುಕೊಳ್ಳುತ್ತಲೇ ನೀರ ಸಮೀಪಕೆ ಓಡುತ್ತಲೇ ಇರಲು
ಅರಿವಾಗುವುದು, ಓಡಿ ಬಂದಿರುವೆನು ನಾನು ಮರಿಚಿಕೆಯೇ ನೀರೆಂದು ಹರಸಿ

ಮತ್ತೆ ಮತ್ತೆ ಮರಳುಗಾಡು ದಾಟಿ ಗೆಲ್ಲಲೇ ಬೇಕೆಂಬ ಬಯಕೆ
ಮತ್ತದೇ ಪಯಣದ ಮುಂದುವರಿದ ಭಾಗ
ಮತ್ತದೇ ನೀರಿಗಾಗಿ ಹುಡುಕಾಟ
ಮತ್ತೆಷ್ಟೋ ಮರೀಚಿಕೆಯ ಭೇಟಿ
ಮತ್ತೆಷ್ಟೋ ಕಾಲ ಬಾಯಾರಿಕೆಯ ಸಂಕಟ
ಸಿಕ್ಕ ನೀರು ಕೂಡ ಮರೀಚಿಕೆಯೇನೋ ಎನ್ನುವ ಆತಂಕ
ಮೊಗೆದು ಕೊಳ್ಳಲು ಹೆಜ್ಜೆ ಹಾಕಲು ಹಿಂಜರಿಯುವ ಮನಸು
ಎಲ್ಲವ ದಾಟಿ ನೀರು ಹುಡುಕಾಡಿ, ಮೊಗೆದು ಕುಡಿದು ಬಾಯಾರಿಕೆಯ ತಣಿಸಿ ಮರಳುಗಾಡು ದಾಟಿ
ಗೆದ್ದ ಕ್ಷಣವ ಸಂಭ್ರಮಿಸಿದಾಗಲೇ ನಿಜವಾದ ಸಂತಸ

- ಶ್ರೀಕಾವ್ಯ

12 Jan 2017, 11:16 am
Download App from Playstore: