ಕತ್ತಲಿಂದ ಬೆಳಕಿನೆಡೆಗೆ ಸಾಗೋ
ನಂಬಿಕೆ ಹರಡಲಿ....
ವಿಶ್ವಾಸ ಬೆಳಗಲಿ...
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯೆಂಬ ಬೆಳಕು ಹರಿಯಲಿ...
ಸಹೋದರತೆ ಹರಡಲಿ...
ವಾತ್ಸಲ್ಯತೆ ಬೆಳಗಲಿ...
ಜಾತಿ ಬೇದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ...
ಧರ್ಮ ಹರಡಲಿ...
ನ್ಯಾಯಬೆಳಗಲಿ...
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃದ್ಧಿಯ ಬೆಳಕು ಹರಿಯಲಿ...
ಆತ್ಮವಿಶ್ವಾಸ ಹರಡಲಿ...
ಆಶಾಜ್ಯೋತಿ ಬೆಳಗಲಿ...
ಅಜ್ಞಾನವೆಂಬ ಕತ್ತಲು ಸರಿದು,
ಜ್ಞಾನವೆಂಬ ಬೆಳಕು ಹರಿಯಲಿ...
- chinmayi
15 Jan 2017, 08:46 am
Download App from Playstore: