ಕಷ್ಟ

ಜೀವನದ ಹಾದಿಯಲಿ
ಹಲವಾರು ಮುಳ್ಳುಗಳು
ನಡೆಯಲು ಕಷ್ಟ
ನಿಲ್ಲಲು ಕಷ್ಟ

ನೋಡುವ ಕಣ್ಣಿನಲಿ
ಕಲಕುವ ನೆನಪುಗಳು
ಮರೆಯಲೂ ಕಷ್ಟ
ನೆನೆಯಲು ಕಷ್ಟ

ಪ್ರಕೃತಿಯ ಜೊತೆಯಲಿ
ಕೊಲ್ಲಉವ ಹಾಡುಗಳು
ಹಾಡಲೂ ಕಷ್ಟ
ಕೇಳಲೂ ಕಷ್ಟ

ಹೊಸ ಕನಸಿಗೆ ಜತೆಯಾಗಿ
ಬರೆದಿಡುವ ಮುನ್ನುಡಿ
ಬಾಳಿನ ಪುಸ್ತಕದಿ
ನಾ ಹಿಡಿದೆ ಕನ್ನಡಿ

- Shiva

16 Jan 2017, 07:37 pm
Download App from Playstore: