ಇದು ಕೇವಲ ಪ್ರೀತಿ ಮತ್ತಿನ್ನೇ

ನಿನ್ನ ರೂಪವ ಕಂಡು ನಾ
ಆಕರ್ಷಿತಳಾಗಲಿಲ್ಲ

ನಿನ್ನ ಸೌಂದರ್ಯ ನೋಡಿ ನಾ
ಮೋಹಿಸಲಿಲ್ಲ

ನಿನ್ನ ಆಕಾರ ನೋಡಿ ನಾ
ಮೈ ಮರೆಯಲಿಲ್ಲ

ಆದರೂ ನಿನ್ನಲಿ ನಾ
ಕಳೆದುಹೋದೆನಲ್ಲ

ಏಕೆಂಬ ಪ್ರಶ್ನೆಗೆ ನನ್ನಲಿ ಉತ್ತರವಿಲ್ಲ
ಆದರೆ ನಾ ನಿನಗೊಲಿದ ಕ್ಷಣ ಮರೆಯಲಾಗೊಲ್ಲ
ಅದನು ಮರೆತದ್ದೆ ಆದರೆ
ನನ್ನ ಜೀವನಕೆ ಅರ್ಥವಿರುವುದಿಲ್ಲ..................

ಇದು ನೀನೆ ಬರೆದ ಕವಿತೆ ಆದರಿಂದು ನನ್ನ ಜೀವನದಲ್ಲಿ ಈ ಕವಿತೆ ಮಾತ್ರ ಉಳಿದಿದೆ ಬರೆದವಳು ನೀನೆ ಇಲ್ಲವಲ್ಲ.....ಏಕಿಷ್ಟು ಕಾಯಿಸುವೆ...... ನಿನ್ನ ಇನ್ನೂಂದು ಕವಿತೆಗೆ ಮನ ಹಾತೊರೆಯುತ್ತಿದೆ ....ಎಂದು ಬರೆಯುವೆ ದಯವಿಟ್ಟು ತಿಳಿಸು
- ಇಂತಿ ನಿನ್ನ ಸದಾ ವಿರಹಿ ಶಶಿ ಕಿರಣ

- ಅಕವಿ

17 Jan 2017, 09:12 am
Download App from Playstore: