ಕಾಣದ ಒಲವೇ....

ಕಾಣದ ಒಲವೇ ಕೇಳೆ
ನಿನಗಾಗಿ ಬರೆದಿರುವೆ ಈ ಕವನ
ಓ ಒಲವೇ ....
ನಿನ್ನ ಮತ್ತೆ ಸೇರುವುದೆಂದು..?
ನೀನೆಲ್ಲಿರುವೆ ನನ್ನ ಚೆಲುವೆ
ಕೂತಲ್ಲಿ ನಿಂತಲ್ಲಿ ಕನಸಲ್ಲಿ ನನಸಲ್ಲಿ 
ಎಲ್ಲೆಲ್ಲೂ ನಿನ್ನ ನೆನಪುಗಳೆ
ನನ್ನ ಕಾಡುತಿವೆಯಲ್ಲ 
ಕಾಣದಂತೆ ನೀ ಏಕೆ ಹೀಗೆ 
ಮರೆಯಾಗಿ ಕುಳಿತಿರುವೆ
ಏನೆಂದು ತಿಳಿಸಲಿ ಒಲವೇ
ನನ್ನ ಮನದ ಹಂಬಲವ  
ಕಳೆಯ ಬಯಸಿದೆ ಮನಸ್ಸು
ನಿನ್ನೊಡನೆ ಒಂದು ಭವ್ಯ ಸಂಜೆಯ
ನಿನ್ನೆದೆಗೆ ಒರಗಿ ನನ್ನೆದೆಯ
ಬಡಿತವ ಕೇಳಬೇಕೆನಿಸಿದೆ
ಜಗವನೆಲ್ಲ ಮರೆತು ನಿನ್ನ
ಸೇರುವ ಆಸೆಯಾಗಿದೆ.. 
ನನ್ನೆದೆಯ ಮಿಡಿತಗಳಿಗೆ
ನೀ ಬಡಿತವಾಗಿ
ನಿನ್ನೊಳಗೆ ನೀನಿರದೆ
ನನ್ನೊಳಗೆ ನೀ ಸೇರು..
ನಿನ್ನಿಂದ ನಾ ಎಂದಿಗೂ
ದೂರಾಗದಂತೆ
ನನ್ನಲ್ಲಿ ಬೆರೆತು ನನ್ನೊಳಗೆ
ನೀನಾಗು, ನಿನ್ನೊಳಗೆ ನಾನಾಗಿ
ಮತ್ತೆ ಸೇರುವಾಸೆ ನಿನ್ನಲಿ
ಜಗವನು ಮರೆಯುವಾಸೆ
ನಮ್ಮಿಬ್ಬರ ಮಿಲನದಲಿ...!

- Pb

17 Jan 2017, 11:11 am
Download App from Playstore: