ಬಾಳ ಸಿಂಧೂರ
ಮಲ್ಲಿಗೆಯ ಮೈಯ್ಯವಳೆ ಒಳ್ಳೊಳ್ಳೆ ಬಟ್ಟೆಯನು ಉಟ್ಟು ನಲಿದಾಡುತಿರುವವಳೆ ಮುಖವೆಲ್ಲ ಮುಂಗಾರು ಮನವೆಲ್ಲ ಮಂದಾರ ನೀ ಬಂದು ನಿಂತರೆ ಖುಷಿ ಅಲೆಯ ಸಾಗರ ಕನಸಲ್ಲಿ ಕಾಡುವ ಕನಸಿನ ಕನ್ಯೆಯಿವಳು ಮರೆಯಾದರೂ ಮುತ್ತಿಟ್ಟ ನೆನಪು ಉಳಿಸಿರುವವಳು ಮನಸ್ಸಿಗೆ ಬಂದು ಮನೆಗೂ ಕಾಲಿಟ್ಟಿರುವವಳೆ ಮದುವೆಯಾದ ಮರುಕ್ಷಣವೇ ಹರ್ಷದ ಮಳೆಯನ್ನು ಸುರಿದವಳೆ ನಿನ್ನ ಮೊಗ ಬಾಡಿದರೆ ಭವ ದುಃಖ ಸಾಗರ ನೀ ನಕ್ಕು ನಲಿದರೆ ಈ ಬಾಳು ಬಂಗಾರ ಏಕೆಂದರೆ ನೀ ನನ್ನ ಬಾಳ ಸಿಂಧೂರ
- Tirumalarao
17 Jan 2017, 01:21 pm
Download App from Playstore: