ಕಣ್ಣೀರ ಕುಂಚದಿ ಗೀಚಿದ ಕವನ
ಈ ನೆನಪುಗಳು,
ಇಂದು ಎದುರಾಗಿ ನಾಳೆ ಮರೆಯಾಗಿ ಮುಂದೆ
ಕೊನೆಯಾಗುವುದೇನೋ ಎಂಬ ಭೀತಿ.
ಈ ಪ್ರೀತಿಯು,
ಇಂದು ಜೂತೆಯಾಗಿ ನಾಳೆ ವ್ಯಥೆಯಾಗಿ ಮುಂದೆ
ದುರಂತ ಕಥೆಯಾಗುವುದೇನೊ ಎಂಬ ಭೀತಿ.
ಈ ಕನಸು,
ಇಂದು ನನಸಾಗಿ ನಾಳೆ ಸೊಗಸಾಗಿ ಮುಂದೆ
ಬಿರುಸಾಗುವುದೇನೊ ಎಂಬ ಭೀತಿ.
ಈ ನೋವು,
ಇಂದು ಹತ್ತಿರವಾಗಿ ನಾಳೆ ಎತ್ತರವಾಗಿ ಮುಂದೆ
ಚಿರವಾಗುವುದೇನೊ ಎಂಬ ಭೀತಿ.
ಈ ವಿರಹ,
ಇಂದು ಸೆರೆಯಾಗಿ ನಾಳೆ ಸಮರವಾಗಿ ಮುಂದೆ
ಸೋಲಾಗುವುದೇನೊ ಎಂಬ ಭೀತಿ.
ಈ ಹೃದಯ,
ಇಂದು ಹಸಿಯಾಗಿ ನಾಳೆ ಹುಸಿಯಾಗಿ ಮುಂದೆ
ಹತವಾಗುವುದೇನೊ ಎಂಬ ಭೀತಿ.
ಈ ಮನಸು,
ಇಂದು ಕದಡಿ ನಾಳೆ ಮುದುಡಿ ಮುಂದೆ
ಮಡಿಯುವುದೇನೊ ಎಂಬ ಭೀತಿ.
ಈ ಸಮಯ,
ಇಂದು ಸಿಹಿಯಾಗಿ ನಾಳೆ ಕಹಿಯಾಗಿ ಮುಂದೆ
ವಿಷವಾಗುವುದೇನೊ ಎಂಬ ಭೀತಿ.
ಈ ಪ್ರೀತಿಯ ಬಿರು ಮಳೆಯಲಿ
ಈ ಭೀತಿಯ ಸಿಡಿಲು ಗುಡುಗಲಿ
ಈ ಫಜೀತಿಯ ಬಿರುಗಾಳಿಯಲಿ
ಸಿಕ್ಕ ಭಗ್ನ ಪ್ರೇಮಿ ಇವನು.....
--ಇಂತಿ ಅಂತು ದೇವದಾಸ್ ಆದ ಶಶಿ ಕಿರಣ
- ಅಕವಿ
17 Jan 2017, 02:11 pm
Download App from Playstore: