ಹೆಣ್ಣಿನ ಬದುಕು

ಹೆಣ್ಣು ತಾಯಿ
ಹೆಣ್ಣು ಕ್ಷಮಯಾಧರಿತ್ರಿ
ಹೆಣ್ಣು ದೇವತೆ
ಹೆಣ್ಣೇ ಮಹಾರಾಣಿ ಇಲ್ಲಿ
ಕತ್ತಲ ಕೋಣೆಯಲಿಟ್ಟು ಹೆಣ್ಣ ಪೂಜಿಸುವರಿಲ್ಲಿ.
ಹೆಣ್ಣು ಕಣ್ಣೊಳಗಿನ ಕನಸುಗಳಿಗೆ ಜಡಿದಿಹಳು ಬೀಗವ ಮನಸೊಳಗಿಟ್ಟು.
ಎಲ್ಲರ ಕೂಡಿ ತಾನು ಆಟವಾಡೊ ಬಯಸುವ ಕಾಲಿಗೆ ಹಾಕಿಹಳು ಬೇಡಿಯ ತಾನು ಹೆಣ್ಣೆಂಬ ಕಾರಣವ ಕೊಟ್ಟು.
ರಾತ್ರಿಯಾಗುವ ಮೊದಲೇ ಮನೆಸೇರಬೇಕಿದೆ ಓಡು ಕಾಲೇ ಎನ್ನುವಳು ಬಾಲ್ಯದಲ್ಲಿ ಎತ್ತವರ ನೆನೆದು, ಯವ್ವನದಲಿ ತನ್ನ ಕೊರಳಲ್ಲಿ ಮಾಂಗಲ್ಯವ ಪಡೆದು, ಮುಪ್ಪಿನಲಿ ತಾನೇ ಹೆತ್ತವರಿಗೆ ಹೆದರಿ.
ಅವಳು ಅಂತರಿಕ್ಷಕ್ಕೆ ಹಾರಿ ಬಂದರೇನು ಸಿಗದು ಸಮಾನ ಸಹಭಾಗಿತ್ವ ಎತ್ತವರ ಪಡೆದವನ ಹಡೆದವನ ಮನದಲ್ಲಿ ,ಅವಳು ಎಂದೆಂದೂ ಹೆಣ್ಣು.
ತನ್ನ ತನು ಮನವ ತನ್ನದೆಂದು ಬದುಕಲಾಗದವಳು, ತನ್ನ ಕನಸುಗಳ ಯಾರ ಹಂಗಿಲ್ಲದೆ ಹಾರಲು ಬಿಡಲಾಗದವಳು.
ಹುಟ್ಟು ಸಾವಿನವರೆಗೂ ಯಾರದೋ ಹಂಗು , ಯಾರದೋ ಭಾವ ಬದುಕಿಗೆ ,
ಯಾರೋ ಹಾಕಿದ ಅಧಿಕಾರದ ಕಟ್ಟಪ್ಪಣೆಗಳಿಗೆ , ಯಾರೋ ಯಾರಿಗಾಗಿಯೋ ಎಳೆದ ಅಂಕೆಯ ರೇಖೆಯ ಅಳಿಸಲಾಗದು ಶತ ಶತಮಾನಗಳೇ ಕಳೆದರೂ ಇಲ್ಲಿ.

- ಶ್ರೀಕಾವ್ಯ

18 Jan 2017, 12:04 pm
Download App from Playstore: