ವೇಶ್ಯೆಯು-ನಾ
ಕಾಮವದು ಪ್ರಕೃತಿಯ ನಿಯಮ,
ಸಂಸ್ಕೃತಿಯದ್ದು ಪ್ರೇಮವು..!
ಕಾಮವನು ಪ್ರೇಮಕ್ಕೆ ಮುಡಿಪಿಟ್ಟು,
ಪ್ರಕೃತಿಯನು ಮನದಾಳಕ್ಕೆ ಹುದುಗುವ
ನೀವೆಲ್ಲ ಸಭ್ಯರೊಂದೆಡೆ..!
ಪ್ರಕೃತಿಗು, ಪ್ರೇಮಕ್ಕು ಬೇಧವರಿಯದೆ
ಕಾಮವನೆ ಅಪ್ಪಿ, ಅದರಲ್ಲಿ
ಪ್ರೇಮವಂ ಹುಡುಕುವರೊಂದೆಡೆ..!
ಪ್ರೇಮವು ಮರೀಚಿಕೆ ನನಗದು,
ನಾನೆಂದೂ ಸಮೀಪಿಸೆನದನು
ಹಸಿವಿಗಾಗಿ ಸೆರಗನ್ಹಾಸುವವಳು ನಾ..!
- ಶ್ರೀ
19 Jan 2017, 12:13 am
Download App from Playstore: