ವೀರ ಕಂದ

ಮರಳಿ ಬಾ ಎಂದೆನ್ನ
ನಾಡು ಕರೆದಿಹುದು
ಅನುಮತಿಯ ನೀಡಮ್ಮ
ನಾ ಹೊರಡಲೀಗ!!

ಸುತ್ತ ಸೈನ್ಯವ ಕಟ್ಟಿ
ಬದುಕಿದವನು ಗಟ್ಟಿ
ನಾಡ ಸೇವೆಗೆ ಈ ತನುವು
ಮುಡಿಪಾಗಿ ಇಹುದಮ್ಮ!!

ಯುಧ್ಧ ಸಾರಲೂ ಬಹುದು
ಕಪಟದಿಂದಲಿ ಹೊಂಚು
ದಾಳಿ ನಡೆಸಲೂ ಬಹುದು
ಗೆದ್ದು ಬಾ ಎಂದೆನ್ನ ಹರಸಮ್ಮ!!

ಸಲಹಿದ ತಾಯಿನಾಡು
ಕೈ ಬೀಸಿ ಕರೆದಿಹುದು
ಹೊರಡಲನುಮತಿಯ ನೀಡಿ
ನನ್ನ ಹುರಿದುಂಬಿಸಮ್ಮ!!

ಮತ್ತೆ ಮರಳುವೆ ತಾಯಿ
ನಾ ಹಿಡಿದು ವಿಜಯ ಪತಾಕೆಯ
ವೀರ ತಿಲಕವನಿಟ್ಟು
ನನ್ನ ಆಶೀರ್ವದಿಸಮ್ಮ!!

ನಾಡ ಸೇವೆಗೆ ನನ್ನ
ಪ್ರಾಣ ಹೋದರೂ ಸರಿಯೇ
ವೀರ ಮರಣದಿ ಮರಳಿ
ನಾ ಧೀರನಾಗುವೆನಮ್ಮ!!

- ಪಿ.ಜಿ.ಜ್ಯೋತಿ

19 Jan 2017, 10:12 am
Download App from Playstore: