ಬಯಲು ಮನಸು

ಅದೋ, ಕಣ್ಣ ಮುಂದಿಹುದು ಸವಿಸ್ತಾರ ಬಯಲು.
ಹಸಿರು ಮರಗಳೂ ಉಂಟು,
ಅಲ್ಲಿ ಒಣ ಭೂಮಿಯೂ ಉಂಟು.
ಕಲ್ಲು ಮುಳ್ಳುಕಂಟಿಗಳೂ ಉಂಟು.
ಹಣ್ಣು ಹೂವು ಪೊದೆಗಳೂ ಉಂಟು.

ಇದೋ, ನನ್ನೊಳ ಮನವೂ ವಿಶಾಲ ಬಯಲು. ನೋವೂ ಉಂಟು, ಅಲ್ಲುಂಟು ನಲಿವೂ.
ಕೆಡುಕೂ, ಒಳಿತೂ ನೂರೆಂಟು.
ಕಹಿಘಳಿಗೆಗಳೂ, ಸವಿನೆನಪುಗಳೂ ಹಬ್ಬಿವೆ.
ಸೋತಬಿಕ್ಕುಗಳೂ, ಗೆದ್ದಕೇಕೆಗಳೂ ತುಂಬಿವೆ

ಇರುವಂತೆ, ಕಲ್ಲು ಕಂಟಿಗಳ ಮುಳ್ಳುಪೊದೆಗಳ ನಡುವಲೇ ಒಂದು ಕಾಲುದಾರಿ,
ನನ್ನ ಮನದಲೂ ಇರುವುದು ಆ ಎಲ್ಲ ಗೊಂದಲ
ನಡುವಲೇ ಹಾದಿ, ಸೇರಲು ಗುರಿ.



ನನ್ನೊಳ ಮನವೂ ವಿಶಾಲ ಬಯಲು.

- Ugnil

20 Jan 2017, 06:44 pm
Download App from Playstore: