ಕಣ್ಣುಗಳು

ಅವಳಿ-ಜವಳಿ ನಾವೆಲ್ಲ ,
ವಾಸ್ತುಗಳ ಕಿತ್ತಾಟ ನಮಗಿಲ್ಲ .
ಮರದಲ್ಲಿ ಮಾವಿನ ಕಾಯಿ
ಕಲ್ಲಿoದ ಹೊಡೆದು ಕಿತ್ತಿಲ್ಲ .

ಕೋಪ ತಾಪ ನಮಗಿಲ್ಲ ,
ಕಲ್ಲು-ಮುಳ್ಳು ತುಳಿದಿಲ್ಲ .
ಒಬ್ಬರನ್ನು ಇನ್ನೊಬ್ಬರು
ಬಿಟ್ಟು ಇರುವುದಿಲ್ಲ .

ನಾವ್ಯಾರೋ ಅಲ್ಲ ನಿನ್ನಲ್ಲಿರುವ
ಕೋಮಲವಾದ ಎರಡು ಕಣ್ಣುಗಳು .
ಒಬ್ಬರ ನೋವಿಗೆ ಇನ್ನೊಬ್ಬರು
ಸ್ಪಂದಿಸುವ ಚುಕ್ಕಿಗಳು .

ಬಾಂದವ್ಯವಿಲ್ಲದ ಹಕ್ಕಿಗಳು
ಆಕಾಶವನ್ನೇ ಮಡಿಚಿಟ್ಟ ಮಂಚದಲಿ ,
ಪ್ರಪಂಚವನ್ನು ಹಾಸಿಗೆಯಾಗಿ ಹರಡಿರುವ
ನಯನಗಳು ನಿನ್ನ ನೇತ್ರಗಳು .

- ಚುಕ್ಕಿ

22 Jan 2017, 12:50 pm
Download App from Playstore: