ವಿರಹ ಗೀತೆಗಳು
೧)ಪ್ರೀತಿಯ ಹಾವಳಿಗೆ ಸಿಲುಕಿ
ಹೃದಯವೆಂಬ ಕರಾವಳಿಗೆ
ನೋವೆಂಬ ಅಲೆಗಳು
ಮೇಲಿಂದ ಮೇಲೆ ಅಪ್ಪಳಿಸುತ್ತಿದೆ
ಈ ಅಲೆಗಳನ್ನು ಪ್ರಚೋದಿಸಲು,
ನಿನ್ನ ನಗುವೆಂಬ ಬಿರುಗಾಳಿ
ಬಿಡುವಿಲ್ಲದಂತೆ ಬೀಸಿ ಸಾಗರವ ಬಡಿದೆಬ್ಬಿಸುತ್ತಿದೆ.
ಈ ನನ್ನ ನಿರೀಕ್ಷೆಯು ವಿಷವಾಗಿ ನನ್ನನೇ ಕೂಲ್ಲುವ ಮುನ್ನ,
ಬಾ ಬೇಗ ಬಾ
ಈ ನನ್ನ ಪರಿಸ್ಥಿತಿಗೆ ಪರಿಹಾರ ತಿಳಿಸು ಬಾ
ನೀ ಇರದೆ ಬದುಕುವುದ ಕಲಿಸು ಬಾ
ಒಮ್ಮೆಯಾದರೂ ಕಣ್ಣೆದುರಿಗೆ ಬಂದು ನನ್ನ ಪ್ರಾಣ ಉಳಿಸು ಬಾ
ನನ್ನ ಹೃದಯಕ್ಕೆ ಕಿವಿಗೊಟ್ಟು ಪ್ರೀತಿಯ ಬಡಿತ ಆಲಿಸು ಬಾ.............
................★★★★★★★★★.......................
೨)ಕಣ್ಣಿನಿಂದ ಜಾರಿದ ಹನಿ ಮಣ್ಣು ಸೇರುವ ಮುನ್ನ
ಪ್ರೀತಿ ತುಂಬಿದ ಹೃದಯ ಚೂರಾಗುವ ಮುನ್ನ
ಎದೆಯ ಬಡಿತ ನಿಂತು ಹೋಗುವ ಮುನ್ನ
ಮನಸಿನ ಮಿಡಿತ ಮಡಿಯುವ ಮುನ್ನ
ನೆನಪುಗಳಿಂದ ಮೂಡಿದ ಬಿರುಕು ದೂಡ್ಡದಾಗುವ ಮುನ್ನ
ಒಮ್ಮೆ ಸೇರು ಬಾ ನನ್ನ............
................★★★★★★★★★.......................
೩) ಕಾಡುತಿದೆ ಒಂಟಿತನ
ನಿನ್ನ ಕಾಣದ ಈ ನಯನ
ಕಣ್ಣೀರ ಕಾರುತಿದೆ ಪ್ರತಿ ಕ್ಷಣ.
ಕೇಳುತಿಲ್ಲವೇ ನನ್ನ ಹೃದಯದ ಕಂಪನ?
ನಿನ್ನ ಕಂಡಾಗ ಆಗುವ ರೋಮಾಂಚನ
ನಿನ್ನ ಧನಿ ಕೇಳಿದಾಗ ಆಗುವ ತಲ್ಲಣ
ಮತ್ತೆ ಎಂದಿಗೆ ಸವಿಯುವೆ ನಾ.................
.............★★★★★★★★★★★.................
೪) ತಾಳಲಾರದೆ ವಿರಹದ ಬೇಗೆ
ಹೃದಯವಾಗಿದೆ ಬಾಡಿದ ಹೂವಿನ ಹಾಗೆ
ಕಾಯುತಿದೆ ಕರ್ಣವು ನಿನ್ನ ನವಿರು ಧನಿಗೆ
ನಿನ್ನ ಕಾಣದೆ ಇನ್ನೂ ಬದುಕುತ್ತಿರುವೆ ನಾ ಹೇಗೆ
ಓ ವಿರಹವೇ ಸಾಧಿಸ ಬೇಡ ನನ್ನ ಮೇಲೆ ಹಗೆ
ನಿನ್ನಿಂದ ಮುಕ್ತವಾಗಿಸೆನ್ನನು ತೋರಿಸಿ ಅವಳನ್ನು --ನನಗೆ
ಅವಳ ಇರುವನ್ನು ಅರಿಯಲು ಬಿಡು ನನ್ನೆದೆಗೆ........
.................★★★★★★★★★★★...............
೫) ಒಂಟಿತನದ ಗೂಡಾಗಿದೆ ಹೃದಯ
ನಿನಗಾಗಿ ಹವಣಿಸುತ್ತಿದೆ ಹರೆಯ
ಹೇಳು, ಹೀಗೆ ನನ್ನ ಕಾಯಿಸುವುದು ಸರಿಯ
ಒಮ್ಮೆಯಾದರೂ ಕಣ್ಣ ಮುಂದೆ ನೀ ಬಾರೆಯ
ವಾಸಿ ಮಾಡುತ ಎದೆಯ ಮೇಲಾದ ವಿರಹದ
-ಗಾಯ
ಹೇಳುತ ಹೃದಯದ ನೋವಿಗೆ ಪೂರ್ಣ ವಿದಾಯ
ಮಾಡುತ ವಿರಹದ ನೆನಪೆಲ್ಲವನು ಮಾಯ....
................★★★★★★★★★★★★............
೬) ಮಾಡುತ್ತಿರುವೆ ನಿನ್ನದೆ ಯೋಚನೆ
ಅನುಭವಿಸುತ ವಿರಹದ ಯಾತನೆ
ಮಾಡಲಾಗುತ್ತಿಲ್ಲ ವಿರಹದ ಪೋಷಣೆ
ಅದಕಾಗೆ ನಾ ಮಾಡಿರುವೆ ಒಂದು ಘೋಷಣೆ
ನೀ ಹೀಗೆಯೆ ನನ್ನ ಕಣ್ಣಿನುಪವಾಸಕೆ ನೀಡುತ್ತಿದ್ದರೆ
-ಮನ್ನಣೆ
ನೀ ನನ್ನೆದುರಾಗಿ ಬಾರಿಸದಿದ್ದರೆ ನನ್ನ ಹೃದಯದ -ವೀಣೆ
ನಾನು ಸಾಯುವೆ ಇದಕ್ಕಿದೆ ನಿನ್ನ ಮೇಲಿನ ಆಣೆ....
.............★★★★★★★★★★★★...............
- ನೀನಿರುವವರೆಗೂ ಮಾತ್ರ ನಾ ಶಶಿ ಕಿರಣ
ನೀ ಇಲ್ಲದಿದ್ದರೆ ಈ ಶಶಿ ಕಳಾ ಹೀನ
- ಅಕವಿ
24 Jan 2017, 04:05 pm
Download App from Playstore: