ಸೌಂಧರ್ಯ
ನೀಲಿ ನೀಲಿ ಆ ಬಾನಿನಲಿ
ತೇಲಿ ಬಂತು ತಂಗಾಳಿಯಲಿ
ಕಣ್ಣ ತುಂಬೊ ಆ ಕನಸಿನಲಿ
ಪ್ರೀತಿ ಬಂತು ಮುಂಬಾಗಿಲಲಿ
ಮೈನೆರೆದ ಆ ಬೆಟ್ಟದಲಿ
ಆ ಬೆಟ್ಟದ ಪುಟ್ಟ ಗಿಡಗಳಲಿ
ನಗುತ್ತಿರುವ ಹೂಗಳ ಮೊಗದಲ್ಲಿ
ಪ್ರೀತಿಯ ನಗುವನ್ನ ಇಟ್ಟೋರು ಯಾರೊ
ಬೆಳ್ಳಿ ಹಕ್ಕಿ ಹಾಡೊ ಹಾಡನ್ನ ಬರೆದು ಕೊಟ್ಟೋರು ಯಾರು
ಹಾರೊ ಚಿಟ್ಟೆ ಮೈಯ ಮೇಲೆ ಬಣ್ಣವ ಬಳಿದೋರು ಯಾರು
ಜಿಗಿದಾಡೊ ಜಿಂಕೆ ಮೈಗೆ ರಂಗೋಲಿ ಇಟ್ಟೋರು ಯಾರು
ಕುಣಿದಾಡೊ ನವಿಲಗೆ ನೃತ್ಯ ಕಲಿಸಿ ಕೊಟ್ಟೋರು ಯಾರು
ಹೂವಿನ ತುಟಿಯಲ್ಲಿ ಜೇನ ಸುರಿದಂತ ರಸಿಕ ನೀನ್ಯಾರೊ
- ಜಿ. ಪ್ರಕಾಶ್
24 Jan 2017, 09:03 pm
Download App from Playstore: