ನರಜನ್ಮ

ದೇಹದ ರಾಜ್ಯಕೆ ಮನಸೆ ಅರಮನೆ

ಆತ್ಮವೇ ರಾಜಕುಮಾರ

ಸತ್ಯದ ತೇರಿಗೆ ನ್ಯಾಯವೇ ಕುದುರೆ

ಜ್ಞಾನವೇ ಕೈಚಾಟಿ

ಹೊರಡಲಿ ಜೀವನ ಯಾನ

ಪ್ರಕೃತಿ ದೇಗುಲ ದುಡಿಮೆಯೇ ದೇವರು

ಶ್ರಮವೇ ಆರಾಧನೆ

ವಿದ್ಯೆಯು ಶಿಖರ ಸಾಧನೆ ಗೋಪುರ

ಛಲವೇ ನಿನ್ನಯ ಚಲನೆ

ನಗುವೇ ಮಲ್ಲಿಗೆ ಸ್ನೇಹವೇ ಸೌಗ೦ಧ

ಆಸೆಗಳೇ ನೆರೆಹೊರೆಯವರು

ಹುಟ್ಟು ಹಗಲು ಸಾವು ಇರುಳು

- ಜಿ. ಪ್ರಕಾಶ್

24 Jan 2017, 09:28 pm
Download App from Playstore: