ಮೂಕ ಕೋಗಿಲೆ
ಯಾವುದಾದರು ಕನಸಿನ ಕೂಪದೊಳಗೆ
ಮುಳುಗಿಸೆನ್ನ ಮನಸನು
ದಾರಿ ಕಾಣದಾಗಲಿ , ಮರಳಿ ತನ್ನೆದೆಯ ಸೇರಲು
ಎತ್ತಣದೊಲವಿನೊಳಗೆ ಸತ್ತ ಮಸಣದ ಹೂವುಗಳು
ಎಷ್ಟೇ ಅರಳಿ ನಕ್ಕರೂ ಗ೦ಧ ಕಾರದಿರಲಿ
ಮು೦ಜಾವಿನ ನಸುಕಲಿ ಎದ್ದ ರವಿತೇಜನು
ಮತ್ತೆ೦ದು ತನ್ನ ಕಿರಣವ ಬೀರದಿರಲಿ
ಕಪ್ಪು ಮೋಡದಲ್ಲಡಗಿರುವ ಮಳೆಯ ಹನಿಗಳು
ಮತ್ತೆ೦ದು ಭೂರಮೆಯ ಮೈಯ ಸೋಕದಿರಲಿ
ಹಾಳು ಹುಣ್ಣಿಮೆಯ ಬೆಳಕಲಿ ಮನಸಿದು
ನೆನೆದು ನೆನೆದು ನಡುಗಿ ಕೊರಗಿದೆ
ಬಟ್ಟ ಬಯಲಲಿ ಕುರುಡು ಹೃದಯವು
ತನ್ನ ಕಣ್ಗೆಜ್ಜೆಯ ಕಳಚಿ ಹೊರಟಿದೆ
ಕನಸು ಮನಸಿನ ಬೇಕು ಬೇಡದಮಲಿನಲಿ
ಮೂಕ ಕೋಗಿಲೆ ಹಾಡಿದೆ
ಮೂಕ ಕೋಗಿಲೆ ಹಾಡಿ
- ಜಿ. ಪ್ರಕಾಶ್
24 Jan 2017, 09:29 pm
Download App from Playstore: