ಮುಗ್ದರ ಮೇಲೆ ದಾಳಿ
ಪುಟ್ಟ ಕಂದ ಗೋಡೆ ಮೇಲೆ ಗೀಚಿದ
ಸ್ವಲ್ಪ ಓರೆ-ಕೋರೆ. ನೆಟ್ಟಗೆ. ಮೇಲೆ-ಕೆಳಗೆ
ನನಗೆ ಅರ್ಥವಾಗದ ಗೂಢಲಿಪಿ ಬರಹ
ಸಿಂದು ನಾಗರಿಕತೆಯ ಲಿಪಿಯಂತೆ ಗೋಚರಿಸಿತು.
ನಾನು ಗೋಡೆ ಮತ್ತು ಪುಟ್ಟಕಂದನ ದಿಟ್ಟಸಿದಿ
ನನ್ನು ನೋಟಕ್ಕೆ ಭಯ ಮತ್ತು ಗೊಂದಲವಿಲ್ಲದೆ ಹಾಲು ಜೇನು ಭಾಷೆಯಲ್ಲಿ ಉತ್ತರಿಸಿತ್ತು
ಕೇಳಿ ಅನಕ್ಷರಸ್ಥರಂತೆ ಮಂಕಾಗಿ ಕುಳಿತೆ
ಅದರ ಮಾತು ತಂಗಾಳಿಯಂತೆ ಬೀಸಿದವು
ಅದರ ಗೋಡೆ ಚಿತ್ರ ಅಪ್ರತಿಮ ಕಲಾವಿದನೆ ಮೀರಿಸಿದವು
ಮತ್ತೆ ಏಕಾಗ್ರತೆಯಿಂದ ತನ್ನ ಕೆಲಸ ಪೂರ್ಣಗೊಳಿಸಲು ಬೆರಳುಗಳು ಆಡಿಸಿತಿತ್ತು
ಗುಡಗು ಮಿಂಚು ಕೆಲವು ಕ್ಷಣದಲ್ಲಿ ಬಂದಿತು
"ಗೋಡೆ ಹಾಳಾಯಿತು,ಬಣ್ಣ ಬಳಿಯುವರ ಯಾರು? ಜನಗಳ ಬಂದು ಏನು ಅನ್ನತ್ತಾರೆ?"
ಕಠೋರ ಧ್ವನಿಗೆ ಪುಟ್ಟ ಕಂದ ಗಾಬರಿ ಆಯಿತು
ಹೆದರಿಕೆಯಿಂದ ಅಳುತಾ ಮೂಲೆ ಸೇರಿತು
ನಾನು ಪ್ರಪಾತಕ್ಕೆ ಜಾರಿ ಬಿದ್ದೆ
ಮಗವಿನ ನಿಷ್ಕಲ ಮನಸಿಗೆ ರಕ್ತದ ಒದ್ದೆ
ಮುಗ್ದ ಮನಸಿಗೆ ಗಾಯದ ಬರೆ
"ವಸದೈವ ಕುಟುಂಬ" ಪದಕ್ಕೆ ಸೆರೆ
"ವಿಶ್ವ ಮಾನವ" ಪುಟ್ಟ ಕಂದನಲ್ಲಿದೆ
"ಕ್ರೂರ ಮಾನವ" ನಮ್ಮ ಮನಸ್ಸಿನಲ್ಲಿದೆ
- Shinan
25 Jan 2017, 04:15 pm
Download App from Playstore: