ವಿದ್ಯಾಬ್ಯಾಸ
ಸ್ಕೂಲು ಚಲೋ
ನೋಡಯ್ಯ ಕಡು ಬಡವರ ಮಕ್ಕಳನ್ನ
ತೊಳೆಯುತ್ತಿರುವರು ಹೋಟೆಲೊಂದರ
ತಟ್ಟೆಗಳನ್ನ
ಉಣ್ಣಲು ಅನ್ನವಿಲ್ಲ ದೂಡುವರು ಕಷ್ಟದಲಿ
ದಿನವನ್ನ
ಯಾಕೆಂದರೆ ಇವರು ಹತ್ತಿಲ್ಲ ಶಾಲಾ
ಮೆಟ್ಟಿಲನ್ನ
ಪ್ರತಿಭೆ ಇದೆ ಇವರಲ್ಲು ಕಲಿತಿಲ್ಲ
ವಿದ್ಯೆಯನ್ನ
ಕಡುಬಡವರಿವರು ಎಲ್ಲಿಂದ ಕೊಡಲಿ
ಹಣವನ್ನ
ನೀಡಬೇಕಿದೆ ನಾವು ಹಣದ ನೆರವನ್ನ
ಕಟ್ಟಬೇಕಿದೆ ಪ್ರತಿಭೆಗಳ ಭವಿಷ್ಯವನ್ನ.
ಮ.ಅಲಿ
- ma.ali
09 May 2015, 10:00 pm
Download App from Playstore: