ಚಂದಿರ ನೀನೆಷ್ಟು ಸುಂದರ

ಓ ಚಂದಿರ,
ಹುಣ್ಣಿಮೆಯ ಹಣೆಯಲಿ
ಕಂಗೂಳಿಸುತ್ತಿರುವ ಸಿಂಧೂರವು ನೀನು.

ಆಕಾಶದ ಮಡಿಲಲ್ಲಿ
ಮಲಗಿರುವ ಪುಟ್ಟ ಕಂದನು ನೀನು.

ತಂಗಾಳಿಯ ಸವಿಗಾನದಲಿ
ಇಣುಕಿರುವ ಪದಗಳು ನೀನು.

ಸಾಗರದೆದೆಯ ಕನ್ನಡಿಯಲಿ
ಪ್ರತಿಫಲಿಸುತ್ತಿರುವ ಚೆಲುವ ನೀನು.

ಅಲೆಗಳ ಅಂತರಂಗದಲ್ಲಿ
ವಿರಹವೆಬ್ಬಿಸುವ ನಲ್ಲನು ನೀನು.

ತಾರೆಗಳ ಮನದಲ್ಲಿ
ಪ್ರೀತಿ ಜಿನುಗಿಸುವ ರಸಿಕನು ನೀನು.

ಕೆಂದಾವರೆಯ ತುಟಿಗಳಲಿ
ಮೂಡಿದ ಮಂದಹಾಸವು ನೀನು.

ಪೃಥ್ವಿಯ ಕೂರಳಲಿ
ಹೊಳೆಯುತಿರುವ ಮುತ್ತಿನ ಹಾರವು ನೀನು.

ಜೀವರಾಶಿಯ ಕಂಗಳಲಿ
ಬೆಳಕ ಚಿಮ್ಮಿಸುವ ಇರುಳ ಸೂರ್ಯನು ನೀನು.

- ಅಕವಿ

27 Jan 2017, 09:38 pm
Download App from Playstore: