ಸದಾ ನಗುತಿರುವ ನೀವು...

ಮನಸಿನಾಳದಿ ಇಣುಕಿ ನೋಡಿದರೆ
ಕಾಣುವುದು ಬರಿ ನೋವು
ಆದರೂ ಸಹಾ ಎಲ್ಲವ ಮರೆತು
ಸದಾ ನಗುತಿರುವ ನೀವು

ನಿಮ್ಮ ಜೊತೆಯೆ ನೆಡೆದು ಬಂದವರು
ತಿರುಗಿ ನೋಡದೆ ಮುಂದೆ ಸಾಗಿದವರು
ಎದುರಲಿ ಹೊಗಳಿ ಹಿಂದೆ ಜರಿಯುವವರು
ಜೊತೆಯಲಿದ್ದು ಇಲ್ಲದವರು.

ದೂರವಾದವರು ಮತ್ತೆ ಬರುವರು
ಕೆಲವರು ಮಾತ್ರ ಮರಳಿ ಬಾರರು
ಇರವ ಜನರು ಬೆಳೆಯಲು ಬಿಡರು
ಬಾರದ ಜನರು ಸದಾ ಹರಸುತಿಹರು

ಏಳು ಬೀಳ ಕಂಡುಕೊಂಡವರು
ಏನೇ ಬಂದರು ಮುಂದೆ ಸಾಗುವರು
ಇಂದು ಇವರು ನಾಳೆ ಅವರು
ಸದಾ ಜೊತೆಯಲೆ ಉಳಿವಕೆಲವರು

(ಸತೀಶ್ ಹುಳಿಯಾರ್)

- Satish Huliyar

29 Jan 2017, 08:47 am
Download App from Playstore: