ಸ್ನೇಹ
ಸ್ನೇಹವೇ ಬದುಕ ಸುಲಭವಾಗಿಸುವ ಜಗದಲ್ಲಿನ ಅತಿ ವಿಸ್ಮಯ,
ಎಂದೆಂದೂ ಕೊನೆಯಾಗದಿರಲಿ ಈ ಸುಂದರ ಬಂಧನ, ಇದಕ್ಕೆಂದೆಂದು ಇರಲಿ ಆ ದೇವರ ಅಭಯ,
ನೋವ ಮರೆಸಿ, ನಗುವ ಕಲಿಸಿ, ಮನವ ಕುಣಿಸಿ ಮಾಡುತಿಹುದು ಜಗವ ತನ್ಮಯ,
ದೂರದರೇನು ತನುವು, ಹೆಚ್ಚಾದರೇನು ಅಂತರ
ಸೋಲದಿರಲಿ ಮನಸುಗಳು, ಬಾಡದಿರಲಿ ಕನಸುಗಳು
ಎಂದೆಂದೂ ಮಿಡಿಯುತಿರಲಿ ಮನಸು,
ಬಯಸುತ ನಲ್ಮೆಯ ಸ್ನೇಹದ ಬಾಹುಬಂದನ,
ಸ್ನೇಹದ ಪರಿಧಿಯೊಳಗೆ ಎಲ್ಲರು ಸಮಾನ,
ಎಂದೆಂದೂ ಮೂಡದಿರಲಿ ಅಸಮಾಧಾನ,
ಕೊನೆಯಾಗದಿರಲಿ ಮಾತು ಮನಸ್ಸುಗಳ ಮಿಲನ,
ಎಂದೆಂದೂ ಸ್ನೇಹಕ್ಕಿರಲಿ ಎಲ್ಲರ ಅಭಿಮಾನ,
ಮತ್ತೆ ಮತ್ತೆ ಸೇರುತಿರಲಿ, ಕನಸಿನ ಬದುಕ ಹೊಸೆದು,
ಮತ್ತದೇ ಹಳೆಯ ಮುಗ್ಧ ನಗುವ ಹರಸಿ, ಬಯಸುತ ನಲ್ಮೆಯ ಸ್ನೇಹದ ಬಂಧನ
- ಶ್ರೀಕಾವ್ಯ
29 Jan 2017, 02:47 pm
Download App from Playstore: