ಪ್ರತಿ ಘಳಿಗೆ
ಕಾಡಿಸುತಿದೆ ಪ್ರತಿ ಘಳಿಗೆ ನಿನ್ನ ನೆನಪು
ಪ್ರೀತಿಯ ಮಾತೊಂದನು
ಕೇಳಲು ಈ ಹೃದಯ ಕಾದಿದೆ..
ಎಲ್ಲಿರುವೆ ನೀ ಮನಸೇ
ಅದೆಷ್ಟು ಕಾಡಿಸುವೆ ಇನ್ನು ಕಾಣದೆ…
ಸದ್ದಿಲ್ಲದೇ ಈ ಮನವ ಕದ್ದೊಯ್ದೆ
ನಿನ್ನೊಡನೆ ಒಮ್ಮೆ ಮಾತನಾಡಲು
ಈ ಹೃದಯ ಕಾದಿದೆ…
ನಿದ್ದೆಯು ಕಾಣೆಯಾಗಿದೆ
ಪ್ರತಿಕ್ಷಣ ನಿನ್ನ ಕಾಣಲು ಬಯಸಿದೆ..
ನಿನ್ನ ಇಂಪಾದ ಧ್ವನಿ ಕೇಳಲು
ಈ ಜೀವ ಕಾಯುತಿದೆ
ನಿನ್ನ ತುಂಟ ನಗು
ಈ ಹೃದಯವನು ಕೆಣಕುತಿದೆ…
ನಿನ್ನ ನೆನದು ನೆನದು
ನಾನಿಲ್ಲಿ ಒದ್ದಾಡುತಿರುವೆ
ನಿನ್ನಲ್ಲಿ ಈ ಹೃದಯ ಬಂಧಿಯಾಗಿದೆ
ನಿನ್ನ ಪ್ರೀತಿಯನ್ನ ಈ ಮನ ಬಯಸುತಿದೆ
ನಿನ್ನ ನೋಡದೆ ಚಡಪಡಿಸುತಿದೆ
ಹೇಗೆ ಇರಲಿ ನಿನ್ನಿಂದ ದೂರ
ನೀ ಇಲ್ಲದೆ ಈ ಜೀವ ಏಕಾಂಗಿಯಾಗಿದೆ...
- Pb
30 Jan 2017, 03:54 pm
Download App from Playstore: