ಚುಟುಕುಗಳು

ಪರೀಕ್ಷಾರ್ತಿ

ವಿದ್ಯಾರ್ಥಿ ಪರೀಕ್ಷೆಯಲ್ಲಿ ಬರೆದನು ಬರೆದನು
ಎಲ್ಲಾ ಹಾಳೆಗಳಲ್ಲಿ
ಮೌಲ್ಯಮಾಪಕರು ಹುಡುಕಿದರು ಹಡುಕಿದರು
ಉತ್ತರಗಳು ಎಲ್ಲಿ

ಕಾಲೇಜ್

ಪಂಚೇಂದ್ರಿಯಗಳಿಗೆ ಕಾಣಲಿಲ್ಲ ಕಾಲೇಜ್
ಮನಸ್ಸಿಗೆ ಕೊಡಲಿಲ್ಲ ಓದವ ಕ್ರೇಜ್
ಕಾಲವೇ ಮುಗಿಸಿತು ನಮ್ಮ ಟೀನೇಜ್
ಜೀವನ ತಿಳಯವಷ್ಟರಲ್ಲಿ ನಮಗೆ ಸಾಯವ ಏಜ್

ಇಂದಿನ ಬೆಡಗಿ

"ಗೆಳತಿ ನಿನ್ನ ಮಾತು ಸಂದರ
ನಿನ್ನ ರೂಪ ಅತಿ ಮಧುರ"
"ನನ್ನ ಮಾತಿಗೆ ನಿನ್ನ ನಯನ ಭಯಂಕರ
ನಿನ್ನ ಮುಷ್ಟಿ ಕೊಟ್ಟಿತು ನನ್ನ ಮುಖಕ್ಕೆ ಓಂಕಾರ"

ಸುಳ್ಳಿನ ಕಂತೆ

ಪಂಚಾಂಗ ಹೇಳಿತು
ನಾನು ಸಂಸಾರಕ್ಕೆ ಅಧಿಪತಿ
ಮದುವೆಯಾದಗ ತಿಳಿತು
ಪತ್ನಿಗೆ ನಾನು ಮಾರುತಿ

ಮುದಿತನ ಹುರುಪು

ಬಿಳಿ ಬಣ್ಣದ ಕೂದಲುಗಳ ಗಾಳಿಯಲ್ಲಿ
ತರಗಲೆಯಂತೆ ಹಾರಡತ್ತಿದ್ದವು
ಕಣ್ಣು ಕನ್ನಡಕದಲ್ಲಿ ಅಗೋಚರ ವಸ್ತುಗಳು
ಹುಡುಕತ್ತಿದ್ದವು
ಮುಖದಗೆರೆಗಳು ಸಾವಿನ ದಾರಿ ತೋರಿಸುತ್ತಿದ್ದವು
ಬಳ್ಳಿಯಂತೆ ದೇಹವು ಶಕ್ತಿ ಹೀನಾಯವಾಗಿತ್ತಿದ್ದವು ಹೃದಯ -ಮನಸ್ಸಿ ಮಾತ್ರ ಹೊಸತನಕ್ಕೆ ಮುನ್ನಗ್ಗಿತ್ತಿದ್ದವು

- Shinan

30 Jan 2017, 03:56 pm
Download App from Playstore: