ನನ್ನವಳು
ಮಲ್ಲಿಗೆಯಾ ಮೈಯವಳು
ಕಮಲದಾ ಮೊಗದವಳು
ನನ್ನೂರ ಚೆಲುವೆ ನನ್ನವಳು
ಚಂದಿರನ ಬಿಂಬವನು
ವದನದಲಿ ಪಡೆದವಳು
ಕುಸುಮದಾ ಕಂಪನ್ನು
ಮನದಲ್ಲಿ ಇಟ್ಟವಳು
ನನ್ನೂರ ಚೆಲುವೆ ನನ್ನವಳು
ಚೆಂಗುಲಾಬಿಯ ಚೆಲುವವಳು
ಸಂಪಿಗೆಯ ಮೂಗಿನವಳು
ಜಿಂಕೆಯಾ ಕಣ್ಣಿನ
ಜೇನ ಹನಿ ತುಟಿಯವಳು
ನನ್ನೂರ ಚೆಲುವೆ ನನ್ನವಳು
ಬಳುಕುವಾ ನಡುವಿನವಳು
ಹಂಸದಾ ನಡಿಗೆಯವಳು
ಕೋಗಿಲೆಯ ಕಂಠದ
ಚೆಲುವಿನಾ ಸಿರಿಯವಳು
ನನ್ನೂರ ಚೆಲುವೆ ನನ್ನವಳು
ಮುತ್ತಿನಾ ಹಲ್ಲಿನವಳು
ಮುಗ್ಧತೆಯ ಮನಸಿನವಳು
ನವಿಲಿನಾ ನಾಟ್ಯದ
ಒಲವಿನಾ ಗಣಿ ಇವಳು
ನನ್ನೂರ ಚೆಲುವೆ ನನ್ನವಳು.
- basavarajsirnayakpreethu
30 Jan 2017, 04:25 pm
Download App from Playstore: